ಇಂದು ಪಟ್ಟರಾಜ ಗವಾಯಿಗಳ ಜಯಂತಿ

  • In State
  • March 3, 2020
  • 480 Views
ಇಂದು ಪಟ್ಟರಾಜ ಗವಾಯಿಗಳ ಜಯಂತಿ

ಗದಗ, ಮಾ. 3 : ಪುಟ್ಟರಾಜ ಗವಾಯಿ ಜನನ: ೦3.೦3.1914 ಎರಡು ವರ್ಷಕ್ಕೆ ತಂದೆ, ತಾಯಿಯನ್ನು ಕಳೆದು ಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರ ಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷ ದವರೆಗೆ ತನ್ನಲ್ಲಿದ್ದ ಸಂಗೀತ ಜ್ಞಾನವನ್ನು ಮಗುವಿಗೆ ನೀಡಿ ದರು. ಆ ಬಳಿಕ ನವಲ ಗುಂದದ ಗವಿಮಠಕ್ಕೆ ಕರೆ ತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು.
ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗು ತ್ತಾರೆಂದು ಆಗ ಯಾರು ತಿಳಿದಿದ್ದರು?
ತಮ್ಮ ಗುರು ಕಲಿತಂತೆಯೇ ಪುಟ್ಟರಾಜರೂ ಸಹ ಸುತ್ತಲಿನ ಪಂಡಿತರಿಂದ ಸಂಗೀತವನ್ನು, ಸಂಗೀತ ವಾದ್ಯಗಳನ್ನಲ್ಲದೆ, ಸಂಸ್ಕೃತ ಹಾಗು ಕನ್ನಡದ ವ್ಯಾಕರಣ ಮೊದಲಾದವುಗಳನ್ನೂ ಸಹ ಕಲಿತರು.
ತಮ್ಮೊಂದಿಗೆ ಜೊತೆಯಾಗಿ ಕಲಿಯುತ್ತಿದ್ದ ಇತರ ಬಾಲಕರಿಗೆ ತಾವೇ ಪಾಠ ಹೇಳಿಕೊಡುವಷ್ಟು ಪರಿಣತ ರಾದರು.ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತ ಗಳಲ್ಲಿ ಅಲ್ಲದೇ, ಪುಟ್ಟರಾಜರು; ತಬಲಾ,ಪಿಟೀಲು, ಹಾರ್ಮೋನಿಯಮ್, ಸಾರಂಗಿ,ಶಹನಾಯಿ ಮುಂ ವಾದ್ಯಗಳನ್ನು ನುಡಿಸುವದರಲ್ಲೂ ಸಹ ಪರಿಣಿತರಾ ದರು.ವೀರೇಶ್ವರ ಪುಣ್ಯಾಶ್ರಮ ನಾಡಿನ ಬಹುದೊಡ್ಡ ಸಂಗೀತ ಸರೋವರ. ಇಲ್ಲಿ ಮಿಂದವರು ಪರಮಪಾವನ. ದೈಹಿಕ ಅಂಧತ್ವ ಲೆಕ್ಕಿಸದೆ ಅಂತರಂಗದ ಕಣ್ಣುಗಳ ತೇಜಸ್ಸಿನಿಂದ ಲೋಕಕ್ಕೆ ಬೆಳಕಾದವರು ಡಾ. ಪುಟ್ಟರಾಜ ಗವಾಯಿಗಳು.
ಹೊಂದಿದ್ದಲ್ಲದೆ, ಎಲ್ಲ ವಾದ್ಯಗಳನ್ನು ಲೀಲಾಜಾಲವಾಗಿ ನುಡಿಸುತ್ತಿದ್ದ ಏಕಮೇವ ಸಂಗೀತಗಾರರು.
ಬದುಕಿನ ಪ್ರತಿಕ್ಷಣಗಳನ್ನು ಧ್ಯಾನಸ್ಥ ಸ್ಥಿತಿಯಲ್ಲಿ ಕಳೆದರು. ಓದು, ಬರಹ, ಸಂಗೀತ ಹಾಗೂ ಲಿಂಗಪೂಜೆಗಳ ಮೂಲಕ ಹೊಸಮಾರ್ಗ ಸೃಷ್ಟಿ ಮಾಡಿದರು. ಆಶ್ರಮದಲ್ಲಿ ಅಭ್ಯಾಸ ಮಾಡುತ್ತಿದ್ದ ಬಡ, ಅನಾಥ ಮಕ್ಕಳಿಗೆ ಒಂದಿನಿತು ತೊಂದರೆಯಾಗದಂತೆ ನೋಡಿಕೊಂಡರು.

Related