ಇಂದು ಪೊಲೀಸ್ ಸಂಸ್ಮರಣಾ ದಿನ

ಇಂದು ಪೊಲೀಸ್ ಸಂಸ್ಮರಣಾ ದಿನ

ಬೆಂಗಳೂರು: ಯಾವುದೇ ಹಬ್ಬ ಹರಿದಿನ ಬಂದರೂ ಸಹ ತಮಗೆ ರಜಾ ಇಲ್ಲದೆ ತಮ್ಮ ಕುಟುಂಬದವರನ್ನು ಪಕ್ಕಕ್ಕಿಟ್ಟು ತಮ್ಮ ಕರ್ತವ್ಯಕ್ಕೆ ಹಾಜರಾಗುವಂಥವರು ಪೊಲೀಸ್ ಅಧಿಕಾರಿಗಳು.

ನಾವೆಲ್ಲರೂ ಇಂದು ನೆಮ್ಮದಿಯಾಗಿದ್ದೇವೆಂದರೆ ಅದಕ್ಕೆ ನಮ್ಮ ದೇಶ ಕಾಯುವ ಸೈನಿಕರು ಮತ್ತು ಪೊಲೀಸ್ ಅಧಿಕಾರಿಗಳು.

ಸೈನಿಕರು ದೇಶದ ರಕ್ಷಣೆಗಾಗಿ ಪ್ರಾಣವನ್ನೂ ಬಲಿದಾನ ಮಾಡಿ ಹುತಾತ್ಮರೆನಿಸಿಕೊಳ್ಳುತ್ತಾರೆ. ನಮ್ಮ ದೇಶದ ಪೊಲೀಸರು-ಅವರು ಯಾವುದೇ ರಾಜ್ಯದವರಾಲೀ; ಕರ್ತವ್ಯನಿತರಾಗಿದ್ದಾಗ ಪ್ರಾಣವನ್ನು ಅಪಾಯಕ್ಕೊಡ್ಡಿ ವೀರಮರಣ ಹೊಂದುವುದು ಸಹ ಅಷ್ಟೇ ಮಹತ್ವದೆನಿಸಿಕೊಳ್ಳುತ್ತದೆ. ಈ ಬಲಿದಾನಗಳನ್ನು ನಾವು ಬೇರೆ ಬೇರೆ ಹೆಸರುಗಳಲ್ಲಿ ಆಚರಿಸುವುದಷ್ಟೇ ವ್ಯತ್ಯಾಸ. ಸೈನಿಕರ ಬಲಿದಾನವನ್ನು ಹುತಾತ್ಮರ ದಿನವನ್ನಾಗಿ ಆಚರಿಸಿದರೆ ಪೊಲೀಸರ ಪ್ರಾಣತ್ಯಾಗವನ್ನು ಪೊಲೀಸ್ ಸಂಸ್ಮರಣಾ ದಿನವಾಗಿ ಅಚರಿಸುತ್ತೇವೆ ಇವತ್ತು ಪೊಲೀಸ್ ಸಂಸ್ಮರಣಾ ದಿನ.

ನಿಮಗೆ ಗೊತ್ತಿರಬಹುದು, 64 ವರ್ಷಗಳ ಹಿಂದೆ ಇದೇ ದಿನದಂದು (ಅಕ್ಟೋಬರ್ 21, 1959) ಚೀನಾದೊಂದಿಗಿನ ಭಾರತದ ಗಡಿಭಾಗದಲ್ಲಿ ಕರ್ತವ್ಯನಿರತರಾಗಿದ್ದ ಕೇಂದ್ರ ಸಶಸ್ತ್ರ ಮೀಸಲು (CRPF) ಪಡೆಯ 10 ಪೊಲೀಸರು ಚೀನಾದ ಸೇನೆ ನಡೆಸಿದ ದಾಳಿಗೆ ಬಲಿಯಾಗಿದ್ದರು. ಅವರ ಸ್ಮರಣಾರ್ಥ ಪ್ರತಿವರ್ಷ ಅಕ್ಟೋಬರ್ 21 ರಂದು ಪೊಲೀಸ್ ಸಂಸ್ಮರಣಾ ದಿನವನ್ನು ದೇಶದಾದ್ಯಾಂತ ಆಚರಿಸಲಾಗುತ್ತದೆ.

ಬೆಂಗಳೂರಿನ ಮೈಸೂರರು ರಸ್ತೆಯಲ್ಲಿರುವ ಸಿಎಆರ್ ಮೈದಾನದಲ್ಲಿ ಜಾರಿಯಲ್ಲಿರುವ ಪೊಲೀಸ್ ಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಭಾಗಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ  ಮತ್ತು ಗೃಹಸಚಿವ ಜಿ ಪರಮೇಶ್ವರ್ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದರು.

Related