ಇಂದು ರಾಜ್ಯದಲ್ಲಿ ‘ನಮೋ’ ಹವಾ

ಇಂದು ರಾಜ್ಯದಲ್ಲಿ ‘ನಮೋ’ ಹವಾ

ಬೆಂಗಳೂರು: ಇಂದು ರಾಜ್ಯದಲ್ಲಿ ಮೋದಿ ಕೇಸರಿ ಧೂಳೆಬ್ಬಿಸಲು ಬರುತ್ತಿದ್ದಾರೆ. ಇಂದು ಪ್ರಧಾನಿ ಮೋದಿ ಹುಮ್ನಾಬಾದ್ ವಿಜಯಪುರ, ಕುಡಚಿ, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ರಾಜ್ಯದ 3 ಕಡೆ ಸಭೆ ನಡೆಸಲಿರೋ ಮೋದಿ ಇಂದು ಸಂಜೆ 6 ಗಂಟೆಗೆ ರಾಜ್ಯ ರಾಜಧಾನಿಯಲ್ಲಿ ಮೆಗಾ ರೋಡ್ ಶೋ ನಡೆಸಲಿದ್ದಾರೆ.

ಹುಮ್ನಾಬಾದ್​​ ಸಮಾವೇಶ ಬಳಿಕ ಪ್ರಧಾನಿ ಮೋದಿ ವಿಜಯಪುರ ಸಮಾವೇಶಕ್ಕೆ ಆಗಮಿಸಲಿದ್ದಾರೆ. ವಿಜಯಪುರದ ಒಟ್ಟು 8 ಕ್ಷೇತ್ರಗಳ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಸಂಜೆ 6:15 ವೇಳೆಗೆ ಬೆಂಗಳೂರಿನ ಗೊಲ್ಲರಹಟ್ಟಿ-ಸುಮನಹಳ್ಳಿ ನಡುವೆ 5.3 ಕಿ.ಮೀ ರೋಡ್ ​ಶೋ ನಡೆಸಲಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಯಲಹಂಕ, ಯಶವಂತಪುರ, ದಾಸರಹಳ್ಳಿ ರಾಜರಾಜೇಶ್ವರಿನಗರ, ಮಹಾಲಕ್ಷ್ಮಿಲೇಔಟ್ 5 ಕ್ಷೇತ್ರಗಳ ಕಾರ್ಯಕರ್ತರು ಈ ವೇಳೆ ಹಾಜರಾಗುವ ಸಾಧ್ಯತೆ ಇದೆ.

ಮಾಗಡಿ ರಸ್ತೆ ಬ್ಯಾಡರಹಳ್ಳಿ ಬಳಿಯ ನೈಸ್ ರಸ್ತೆ ಜಂಕ್ಷನ್​ನಿಂದ ಸುಮನಹಳ್ಳಿ ಜಂಕ್ಷನ್ ತನಕ ರೋಡ್​​ ಶೋ ನಡೆಯಲಿದ್ದು, ಮೋದಿ ಚುನಾವಣಾ ರೋಡ್​ ಶೋಗೆ ಪೊಲೀಸರು ಭಾರೀ ಬಂದೋಬಸ್ತ್ ಮಾಡಿದ್ದಾರೆ. ಮೋದಿ ನಾಳೆ ಸಂಜೆ 5.25ಕ್ಕೆ ಆಗಮಿಸಲಿದ್ದು, ಸಂಜೆ 6 ಗಂಟೆಗೆ ನೈಸ್ ರಸ್ತೆ ಜಂಕ್ಷನ್ ನಿಂದ ರೋಡ್ ಶೋ ಆರಂಭಿಸಲಿದ್ದಾರೆ. ಸುಮನಹಳ್ಳಿ ಜಂಕ್ಷನ್ ತನಕ ಸುಮಾರು 5.3 ಕಿ. ಮೀ. ರೋಡ್​ ಶೋ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 3 ಸಾವಿರಕ್ಕೂ ಅಧಿಕ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

 

Related