ಮೂರೂವರೆ ವರ್ಷಗಳಲ್ಲಿ ರಾಮಮಂದಿರ ಸಿದ್ಧ!

ಮೂರೂವರೆ ವರ್ಷಗಳಲ್ಲಿ ರಾಮಮಂದಿರ ಸಿದ್ಧ!

ಜೈಪುರ, ಫೆ. 23 : ಕಾಮಗಾರಿ ಆರಂಭಿಸಿದ ಮೂರೂವರೆ ವರ್ಷಗಳ ಒಳಗೆ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖಜಾಂಚಿ ಗೋವಿಂದ ದೇವ ಗಿರಿಜಿ ಮಹಾರಾಜ್ ತಿಳಿಸಿದ್ದಾರೆ. ಅಕ್ಷರಧಾಮ ದೇವಾಲಯ ನಿರ್ಮಿಸಲು ಮೂರು ವರ್ಷ ತಗುಲಿತ್ತು. ಏಕತೆಯ ಪ್ರತಿಮೆಯ ನಿರ್ಮಾಣವನ್ನೂ ಮೂರು ವರ್ಷ ಗಳಲ್ಲಿ ಪೂರ್ಣಗೊಳಿಸಲಾಗಿದೆ. ಹಾಗೇ ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರ ಕೂಡ ಇಷ್ಟೇ ಸಮಯದಲ್ಲಿ ನಿರ್ಮಾಣಗೊಳ್ಳಲಿದೆ. ಈ ಹಿಂದೆ ಮಂದಿರ ನಿರ್ಮಾಣಕ್ಕಾಗಿ ಕೋಟ್ಯಂತರ ಹಿಂದೂಗಳು ಇಟ್ಟಿಗೆ ನೀಡಿದ್ದರು. ಅದೇ ರೀತಿ ಈಗಲೂ ಭಕ್ತರು ಹಣಕಾಸು ನೆರವು ನೀಡುತ್ತಾರೆ ಎಂಬ ವಿಶ್ವಾಸವಿದೆ. ಇಲ್ಲಿ ದೊಡ್ಡ ಮೊತ್ತವನ್ನಷ್ಟೇ ನೀಡಬೇಕೆಂದೇನಿಲ್ಲ. ಶ್ರೀರಾಮ ಎಲ್ಲರಿಗೂ ಸೇರಿದವನಾಗಿದ್ದು, ಸಣ್ಣ ಮೊತ್ತವನ್ನೂ ನಾವು ಸ್ವೀಕರಿಸುತ್ತೇವೆ ಎಂದು ಗಿರಿಜಿ ಮಹಾರಾಜ್ ಹೇಳಿದ್ದಾರೆ.

Related