ಈ ಎಸ್​ಎಂಎಸ್​ ಸುಳ್ಳಲ್ಲ, ಇದು ಬಿಬಿಎಂಪಿಯ ಅಧಿಕೃತ ಸಂದೇಶ!

ಈ ಎಸ್​ಎಂಎಸ್​ ಸುಳ್ಳಲ್ಲ, ಇದು ಬಿಬಿಎಂಪಿಯ ಅಧಿಕೃತ ಸಂದೇಶ!

ಬೆಂಗಳೂರು: ಸಿಲಿಕಾನ್ ಸಿಟಿ, ಬೆಂಗಳೂರು ಮಂದಿಗೆ ಬಿಬಿಎಂಪಿ ಈಗಾಗಲೇ ಆಸ್ತಿ ತೆರಿಗೆ ಕಟ್ಟಲು ಕಳೆದ ವಾರ ಮೊಬೈಲ್ ಸಂಖ್ಯೆಗೆ ಸಂದೇಶವನ್ನು ಕಳಿಸಿತ್ತು. ಆದರೆ ರಾಜಧಾನಿಯ ಮಂದಿ ಮೆಸೇಜನ್ನು ನಿರ್ಲಕ್ಷಿಸಿದ್ದರಿಂದ ಬಿಬಿಎಂಪಿ ಅಧಿಕಾರಿಗಳು ಮತ್ತೆ ಸಾರ್ವಜನಿಕರಿಗೆ ಸಂದೇಶ ಕಳಿಸಿ ಇದು ಬಿಬಿಎಂಪಿಯ ಇಂದ ಬಂದಿರುವ ಸಂದೇಶ ಹಾಗಾಗಿ ಇದನ್ನು ನಿರ್ಲಕ್ಷಿಸಬೇಡಿ ಎಂದು ತಿಳಿಸಿದೆ.

ಹೌದು, ಕಳೆದ ವಾರ, ಬೆಂಗಳೂರಿನ ಅನೇಕ ಮಂದಿಗೆ ಆಸ್ತಿ ತೆರಿಗೆ ಪಾವತಿಸುವಂತೆ ಬಿಬಿಎಂಪಿಯಿಂದ ಎಸ್‌ಎಂಎಸ್ ಬಂದಿತ್ತು. ಇದನ್ನು ಗಮನಿಸಿದ ಜನ ಇದು ಸೈಬರ್ ಕ್ರೈಂ ಇರಬೇಕು ಎಂದು ಸುಮ್ಮನಾಗಿದ್ದರೂ ಇನ್ನೂ ಕೆಲವರು ದೂರು ದಾಖಲಿಸಲು ಮುಂದಾಗಿದ್ದರು. ಆದರೆ ಈಗ ಈ ಮೆಸೇಜ್ ಬಗ್ಗೆ ಬಿಬಿಎಂಪಿ ಸ್ಪಷ್ಟನೆ ನೀಡಿದ್ದು ಈ ಎಸ್​ಎಂಎಸ್​ ಸುಳ್ಳಲ್ಲ. ಇದು ಬಿಬಿಎಂಪಿಯ ಅಧಿಕೃತ ಸಂದೇಶ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಬಿಬಿಎಂಪಿ ಕಳಿಸಿದ ಮೆಸೇಜ್ ಹೀಗಿದೆ

ಆಸ್ತಿ ತೆರಿಗೆಯು BBMP ಯ ಆದಾಯದ ಪ್ರಾಥಮಿಕ ಮೂಲವಾಗಿದೆ. ಮತ್ತು BBMP ಯ ಕಾರ್ಯನಿರ್ವಹಣೆ ಮತ್ತು ಅದರ ಸೇವೆ ವಿತರಣೆಗೆ ನಿರ್ಣಾಯಕವಾಗಿದೆ. ಎಲ್ಲಾ ಮಾಲೀಕರು ತಮ್ಮ ಆಸ್ತಿ ತೆರಿಗೆಯನ್ನು ತ್ವರಿತವಾಗಿ ಪಾವತಿಸಲು ನಾವು ವಿನಂತಿಸುತ್ತೇವೆ. ಇದನ್ನು ಸುಗಮಗೊಳಿಸಲು ಬಿಬಿಎಂಪಿಯು ಬಾಕಿ ಇರುವ ಅಥವಾ ಮಿತಿಮೀರಿದ ಆಸ್ತಿ ತೆರಿಗೆ ಹೊಂದಿರುವ ವ್ಯಕ್ತಿಗಳಿಗೆ SMS ಸಂದೇಶಗಳನ್ನು ಮತ್ತು ನೋಟಿಸ್‌ಗಳನ್ನು ಕಳುಹಿಸುತ್ತಿದೆ ಎಂದು ಬಿಬಿಎಂಪಿ ಮೆಸೇಜ್​ನಲ್ಲಿ ತಿಳಿಸಿದೆ.

ಇನ್ನು ಸಾರ್ವಜನಿಕರು ತೆರಿಗೆ ಪಾವತಿಸುವಂತೆ ಬಿಬಿಎಂಪಿ ಮನವಿ ಮಾಡಿದೆ. ನಾಗರಿಕರು ಆನ್‌ಲೈನ್‌ನಲ್ಲಿ https://bbmptax.karnataka.gov.in/ ತೆರಿಗೆ ಪಾವತಿಸಬಹುದು. ಯಾವುದೇ ಪ್ರಶ್ನೆಗಳಿದ್ದಲ್ಲಿ, ಸಹಾಯವಾಣಿ 1533 ಗೆ ಕರೆ ಮಾಡಬಹುದು ಎಂದು ಪಾಲಿಕೆ ತಿಳಿಸಿದೆ.

 

Related