ಮತ್ತೆ ತೆರೆ ಮೇಲೆ ಒಂದಾಗಲಿರುವ ಈ ಜೋಡಿ

ಮತ್ತೆ ತೆರೆ ಮೇಲೆ ಒಂದಾಗಲಿರುವ ಈ ಜೋಡಿ

ಬೆಂಗಳೂರು: ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆಯಾಗಿ ನಟಿ ಭಾವನಾ ಮೆನನ್ ಈಗಾಗಲೇ ಟಗರು ಮತ್ತು ಬಜರಂಗಿ2 ಚಿತ್ರದಲ್ಲಿ ನಟಿಸಿದ್ದಾರೆ. ಅದಾದ ಬಳಿಕ ಮತ್ತೆ ಇದೀಗ ಉತ್ತರಕಾಂಡ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ನಟಿ ಭಾವನಾ ಅವರು ಜೋಡಿ ಆಗಲಿದ್ದಾರೆ ಎಂಬ ಮಾಹಿತಿಯನ್ನು ಸ್ವತಹ ಭಾವನಾ ಅವರೇ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.

ಉತ್ತರಕಾಂಡ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು ನನ್ನ ಭಾಗದ ಚಿತ್ರೀಕರಣ ಮೇ ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.

ಟಗರು ಮತ್ತು ಬಜರಂಗಿ2 ಚಿತ್ರಗಳಲ್ಲಿ ಇವರಿಬ್ಬರ ಜೋಡಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಮತ್ತೆ ಈ ಜೋಡಿ ತೆರೆ ಮೇಲೆ ಒಂದಾಗುತ್ತಿರುವುದರಿಂದ ಶಿವರಾಜ್ ಕುಮಾರ್ ಮತ್ತು ಭಾವನಾ ಅಭಿಮಾನಿಗಳಿಗೆ ಮತ್ತಷ್ಟು ಸಂತಸ ಮೂಡಿಸುತ್ತಿದೆ.

ಉತ್ತರಕಾಂಡ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರ ಪತ್ನಿಯ ಪಾತ್ರದಲ್ಲಿ ಭಾವನಾ ನಟಿಸಿಲಿದ್ದಾರೆ ಎನ್ನಲಾಗುತ್ತಿದೆ. 20 ದಿನಗಳ ಕಾಲ ಭಾವನ ಪಾತ್ರದ ಶೂಟಿಂಗ್ ನಡೆಯಲಿದೆ ಎನ್ನಲಾಗುತ್ತಿದೆ. ಶಿವಣ್ಣ ಮತ್ತು ಡಾಲಿ ನಟನೆಯ ಈ ಸಿನಿಮಾದ ಚಿತ್ರೀಕರಣ ಸದ್ಯ ಬಿಜಾಪುರದಲ್ಲಿ ಭರದಿಂದ ನಡೆಯುತ್ತಿದೆ. ಚೈತ್ರ ಆಚಾರ್, ದಿಗಂತ್, ಯೋಗರಾಜ್ ಭಟ್, ಮಲಯಾಳಂ ನಟ ವಿಜಯ್ ಬಾಬು ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

 

Related