ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಈ ನಟಿ

ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಈ ನಟಿ

ಬೆಂಗಳೂರು: ಕನ್ನಡದ ಕಿಸ್ ಚಿತ್ರದ ಮೂಲಕ ಕರುನಾಡ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಮತ್ತು ಪಡ್ಡೆ ಹುಡುಗರ ನೆಚ್ಚಿನ ನಟಿಯಾದ ಕಿಸ್ ಚಿತ್ರದ ನಾಯಕಿ ಶ್ರೀ ಲೀಲಾ ಅವರು ಇತ್ತೀಚಿಗೆ ತೆಲುಗು ಭಾಷೆಯಲ್ಲಿ ನಟಿಸುತ್ತಿದ್ದು, ತೆಲುಗು ಮತ್ತು ಕನ್ನಡ ಸೇರಿ 9 ಚಿತ್ರಗಳಿಗೆ ಸಹಿ ಮಾಡಿದ್ದಾರೆಂಬ ಸುದ್ದಿ ಹೊರ ಬಿದ್ದಿದೆ.

ಹೌದು, ಕನ್ನಡದ ‘ಕಿಸ್’ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶ್ರೀಲೀಲಾ ಇದೀಗ ಟಾಲಿವುಡ್ ಅಂಗಳದಲ್ಲಿ ಭರ್ಜರಿ ಅವಕಾಶ ಬಾಚಿಕೊಳ್ತಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಕ ಕನ್ನಡದ ನಟಿ ಶ್ರೀಲೀಲಾ ಅವರು ತೆಲುಗಿನಲ್ಲಿ ಸದ್ದು ಮಾಡ್ತಿದ್ದಾರೆ.

ಮಹೇಶ್ ಬಾಬು ಸಿನಿಮಾ, ನಂದಮೂರಿ ಬಾಲಕೃಷ್ಣ, ರಾಮ್ ಪೋತಿನೇನಿ, ವಿಜಯ್ ದೇವರಕೊಂಡ, ಪವನ್ ಕಲ್ಯಾಣ್ ನಟನೆಯ ‘ಉಸ್ತಾತ್ ಭಗತ್ ಸಿಂಗ್’, ನಿತಿನ್ ಹೊಸ ಸಿನಿಮಾ, ನವೀನ್ ಪೊಲಿಸೆಟ್ಟಿ ಸಿನಿಮಾ, ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾ ಪಂಜ ವೈಷ್ಣವ್ ತೇಜ್ ಅವರ ‘ಆದಿಕೇಶವ’ ಸಿನಿಮಾಗಳು ನಟಿಯ ಕೈಯಲ್ಲಿದೆ. ಕನ್ನಡ ಸೇರಿ ಒಟ್ಟು 9 ಸಿನಿಮಾಗಳಲ್ಲಿ ಶ್ರೀಲೀಲಾ ಲಿಸ್ಟ್‌ನಲ್ಲಿದೆ.

ತನ್ನ ಮುದ್ದು ಮುಖ, ಅದ್ಭುತ ನಟನೆ ಮೂಲಕ ಮೋಡಿ ಮಾಡ್ತಿರುವ ಶ್ರೀಲೀಲಾ ಅವರು ಸ್ಟಾರ್ ನಟಿಯಾಗಿ ನಿಲೋದ್ರಲ್ಲಿ ಅನುಮಾನವೇ ಇಲ್ಲ.

Related