ನಂಗೂ ಬೇಜಾರಾಗ್ತಿದೆ

ನಂಗೂ ಬೇಜಾರಾಗ್ತಿದೆ

ಬೆಂಗಳೂರು, ಮಾ. 7: ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಇಂದು ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇನ್ಸ್ಟಾದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.
ರಾಧಿಕಾ ಶೇರ್ ಮಾಡಿರುವ ವಿಡಿಯೋದಲ್ಲಿ, ಪ್ರತಿ ವರ್ಷ ನನ್ನ ಹುಟ್ಟುಹಬ್ಬದ ದಿನ ಬೇರೆ ಜಾಗಗಳಿಂದ, ಬೇರೆ ಊರುಗಳಿಂದ ನನ್ನನ್ನು ಭೇಟಿ ಮಾಡಿ ವಿಶ್ ಮಾಡಲು ಬರುತ್ತೀರಾ ಎಂದು ನನಗೆ ಗೊತ್ತು. ಕಳೆದ ವರ್ಷ ಕೂಡ ಮಿಸ್ ಆಯ್ತು. ಈ ವರ್ಷ ದಯವಿಟ್ಟು ಯಾರು ಬೇಜಾರು ಮಾಡಿಕೊಳ್ಳಬೇಡಿ, ಬೈಕೋಬೇಡಿ. ಈ ವರ್ಷ ಕೂಡ ನಾನು ನನ್ನ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಏಕೆಂದರೆ ನನಗೆ ಇಬ್ಬರು ಪುಟಾಣಿ ಮಕ್ಕಳಿದ್ದಾರೆ. ಹಾಗಾಗಿ ಈ ವರ್ಷ ಹುಟ್ಟುಹಬ್ಬ ಆಚರಿಸುವುದು ಸ್ವಲ್ಪ ಕಷ್ಟ ಎಂದರು.

Related