ಯುವಕ ಆತ್ಮಹತ್ಯೆ

ಯುವಕ ಆತ್ಮಹತ್ಯೆ

ಮಂಗಳೂರು, ಮಾ. 10 : ನಗರದ ಮೋರ್ಗನ್ಗೇಟ್ ಬಳಿ ಚಲಿಸುತ್ತಿದ್ದ ರೈಲಿನಡಿಗೆ ಯುವಕನೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಕ್ಯಾಲಿಕಟ್ ನಿವಾಸಿ ಸುಹಾಸ್ (33) ಆತ್ಮಹತ್ಯೆ ಮಾಡಿಕೊಂಡ ಯುವಕ. ರಾತ್ರಿ 11.30ರ ವೇಳೆ ನಗರದಿಂದ ವೆಸ್ಟ್ -ಕೋಸ್ಟ್ ರೈಲು ಸಂಚರಿಸುತ್ತಿದ್ದಾಗ ಯುವಕ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ರೈಲ್ವೇ ಸಿಬ್ಬಂದಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಇನ್ಸ್ಪೆಕ್ಟರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ರೈಲ್ವೇ ಹಳಿಯಲ್ಲಿ ಯುವಕನ ಶವ ಎರಡು ಕಾಲುಗಳು ಬೇರ್ಪಟ್ಟ ಸ್ಥಿತಿಯಲ್ಲಿ ಮೋರ್ಗನ್ಗೇಟ್ ಎರಡನೇ ಬ್ರಿಡ್ಜ್ನಡಿ ಬಳಿ ಪತ್ತೆಯಾಗಿದೆ.

Related