ವಿಶ್ವದ ದೈತ್ಯ ಆಲದ ಮರಕ್ಕೆ ಧಕ್ಕೆ

 ವಿಶ್ವದ ದೈತ್ಯ ಆಲದ ಮರಕ್ಕೆ ಧಕ್ಕೆ

ಕೋಲ್ಕತಾ: ಬೆಂಗಳೂರಿನಲ್ಲಿರುವ ದೊಡ್ಡ ಆಲದ ಮರಕ್ಕಿಂತಲೂ ಬೃಹತ್  ಹೌರಾದಲ್ಲಿರುವ ಆಲದ ಮರ ಧಕ್ಕೆಯಾಗಿದೆ.  ಕೋಲ್ಕತಾ ಸೇರಿದಂತೆ ಆಂಧ್ರಪ್ರದೇಶದ ಮೆಹಬೂಬ್ ನಗರ,  ತಮಿಳುನಾಡಿನ ಚೆನ್ನೈನಲ್ಲ್ಲಿ ದೈತ್ಯ ಆಲದ ಮರಗಳಿವೆ. ಭಾರತದ ಪುರಾತನ ಆಲದ ಮರಗಳಲ್ಲೇ  ಮೊನ್ನೆಮೊನ್ನೆ ಅಪ್ಪಳಿಸಿ ಹೋದ ಅಂಪನ್ ಚಂಡಮಾರುತಕ್ಕೆ ಕೋಲ್ಕತಾದ ಹೌರಾ ಉದ್ಯಾನವನದಲ್ಲಿರುವ 342 ವರ್ಷದಷ್ಟು ಪುರಾತನವಾದ ಆಲದ ಮರಕ್ಕೆ ಘಾಸಿಯಾಗಿದೆ.

ಎರಡು ರಾಜ್ಯಗಳ ಲಕ್ಷಾಂತರ ಜನಜೀವನವನ್ನೇ ತಲ್ಲಣಗೊಳಿಸಿ ಹೋಗಿದೆ. ಇನ್ನೂ ಅನೇಕ ಪ್ರಾಣಿ ಪಕ್ಷಗಳು ನೆಲೆ ಕಳೆದುಕೊಂಡಿವೆ. ವೃಕ್ಷ ಸಂಪತ್ತೂ ಸಾಕಷ್ಟು ನಷ್ಟವಾಗಿವೆ. ವಿಶ್ವದ ಅತಿ ದೊಡ್ಡ ಆಲದ ಮರಕ್ಕೂ ಕೂಡ ಧಕ್ಕೆಯಾಗಿದೆ.

ಇದು ವಿಶ್ವದಲ್ಲೇ ಅತೀ ದೊಡ್ಡದು ಎಂಬ ದಾಖಲೆ ಹೊಂದಿದೆ. ಭಾರತೀಯ ಸಸ್ಯ ಸರ್ವೇಕ್ಷಣಾ ಇಲಾಖೆಯ (ಬೋಟೋನಿಕಲ್ ಸರ್ವೇ ಆಫ್ ಇಂಡಿಯಾ) ಲೋಗೋದಲ್ಲಿ ಈ ಆಲದ ಮರವನ್ನು ಬಳಸಲಾಗಿದೆ ಎಂದರೆ ಇದು ಎಂಥ ಹೆಮ್ಮರ ಇರಬಹುದು.

Related