ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ರಾಮದುರ್ಗ : ಮಲಪ್ರಭಾ ನದಿ ಪ್ರವಾಹಕ್ಕೆ ತುತ್ತಾಗಿರುವ ತಾಲ್ಲೂಕಿನ ಅವರಾದಿ ಗ್ರಾಮದ ಜನರಿಗಾಗಿ ಪರಿಹಾರ ಕೇಂದ್ರ ನಿರ್ಮಿಸಲು ಗ್ರಾಮಕ್ಕೆ ತೆರಳಿದ್ದ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಗ್ರಾಮದ ಜನತೆ ತೀವ್ರ ತರಾಟೆಗೆ ಮಂಗಳವಾರ ತೆಗೆದುಕೊಂಡರು.

ನದಿಗೆ ಸುಮಾರು 25 ಸಾವಿರ ಕ್ಯುಸೆಕ್ಸ್ ನೀರು ಹರಿಬಿಟ್ಟಿದ್ದರಿಂದ ಗ್ರಾಮವನ್ನು ನೀರು ಆವರಿಸಿದೆ. ಅಲ್ಲಿನ ಜನರನ್ನು ಪಕ್ಕದ ಶಿವಪೇಟೆ ಗ್ರಾಮದಲ್ಲಿ ಪರಿಹಾರ ಕೇಂದ್ರದಲ್ಲಿ ನೆಲೆಸುವಂತೆ ಮನವೊಲಿಸಲು ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡ ಮುಂದಾಗಿತ್ತು.

ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಮಹಾದೇವಪ್ಪ ಯಾದವಾಡ, ತಹಶೀಲ್ದಾರ ಗಿರೀಶ ಸ್ವಾದಿ, ತಾಲ್ಲೂಕು ಪಂಚಾಯ್ತಿ ಇಒ ಮುರಳೀಧರ ದೇಶಪಾಂಡೆ ಮತ್ತು ಪೊಲೀಸರು ಗ್ರಾಮ ತೊರೆದು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಳ್ಳಬೇಕು ಎಂದು ಸೂಚನೆ ನೀಡುತ್ತಿದ್ದಂತೆ ರೊಚ್ಚಿಗೆದ್ದ ಜನ ಬಾಯಿಗೆ ಬಂದಂತೆ ಕೂಗಾಡಿದರು.

ಅವರಾದಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಯಲ್ಲಮ್ಮ ಮೋಟೆ ಮತ್ತು ಚನ್ನಬಸಯದಯ ಕುಲಕರ್ಣಿ ನೇತೃತ್ವದ ನೂರಾರು ಗ್ರಾಮಸ್ಥರು ಕೂಗಾಡಿ, ‘ಕಳೆದ ವರ್ಷದ ಪ್ರವಾಹ ಬಂದಾಗ ಹಾನಿಯಾದ ಬೆಳೆ ಮತ್ತು ಮನೆಗಳಿಗೆ ಪರಿಹಾರ ನೀಡಿಲ್ಲ. ಹೊಲಗಳ ಸಮೀಕ್ಷೆ ಸರಿಯಾಗಿ ಮಾಡಿಲ್ಲ. ನೀರು ನುಗ್ಗದ ಬಿಜೆಪಿ ಬೆಂಬಲಿತರಿಗೆ ಪರಿಹಾರ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related