ಲಾಕ್‍ಡೌನ್‌ನಲ್ಲಿ ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕ

ಲಾಕ್‍ಡೌನ್‌ನಲ್ಲಿ ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕ

ರಬಕವಿ-ಬನಹಟ್ಟಿ : ನೇಕಾರರ ಅನುಕೂಲಕ್ಕಾಗಿ ಸರಕಾರದಿಂದ 47 ಲಕ್ಷ ರೂ. ಗಳ ವಿಶೇಷ ಯೋಜನೆಯನ್ನು ಹಿಂದೆ ಶಾಸಕರಾಗಿದ್ದಾಗ ಸಿದ್ದು ಸವದಿಯವರು ಜಾರಿಗೆ ತಂದು, ನೇಕಾರರ ಉಪಯೋಗಕ್ಕಾಗಿ ಬಳಕೆ ಮಾಡಬೇಕೆಂಬ ಸದುದ್ದೇಶ ಹೊಂದಿದ್ದರು.

ಲಾಕ್‍ಡೌನ್‍ನಲ್ಲಿ ನೇಕಾರರು ತೀವ್ರ ಸಂಕಷ್ಟಕ್ಕೊಳಗಾದಾಗ ಅದನ್ನು ನೇಕಾರರಿಗೆ ಕಿಟ್ ನೀಡಲು ಬಳಸಿದ್ದಾರೆ. ನೇಕಾರರ ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕ ಸಿದ್ದು ಸವದಿಯವರನ್ನು ವಿನಾಕಾರಣ ದೂಷಿಸುವುದು ಸರಿಯಲ್ಲ ಎಂದು ಕೆ.ಎಚ್.ಡಿ.ಸಿ. ನೇಕಾರ ಮುಖಂಡ ಸಿದ್ದಪ್ಪ ಗಂವಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದಪ್ಪ ಗಂವಾರ, ತೇರದಾಳ ಕ್ಷೇತ್ರದಿಂದ ನೇಕಾರರ ಮಗಳೆಂದು ಹೇಳಿಕೊಂಡು ವಿಧಾನಸಭೆ ಪ್ರವೇಶಿಸಿ ನೇಕಾರ ಪ್ರತಿನಿಧಿಯಂದು ಉಮಾಶ್ರೀಯವರು ಮಂತ್ರಿ ಸಹ ಅವರ ಆಡಳಿತದಲ್ಲಿ ನೇಕಾರರ ಪರ ಅನೇಕ ಹೋರಾಟಗಳನ್ನು ನೇಕಾರರನ್ನು ನಿರ್ಲಕ್ಷಿಸಿದರು.

ಉಮಾಶ್ರೀಯವರು ನೇಕಾರರಿಗೆ ಅನುಕೂಲವಾಗುವ ಯಾವುದೇ ಯೋಜನೆಗಳನ್ನು ತರದೆ ನೇಕಾರರನ್ನು ತೊಂದರೆಯಾಗದಂತೆ ಮಾಡಿದರು. ಶಾಸಕ ಸಿದ್ದು ಸವದಿಯವರ ಪ್ರಯತ್ನದಿಂದ ನೇಕಾರರ ಸಮ್ಮಾನ ಯೋಜನೆ ಜಾರಿಯಾಗಿ ಪ್ರತಿ ನೇಕಾರನಿಗೆ 2 ಸಾವಿರ ರೂ. ಬರುವಂತಾಗಿದೆ. ಅದನ್ನು 5 ಸಾವಿರಕ್ಕೆ ಹೆಚ್ಚಳ ಮಾಡುವುದಕ್ಕೆ ಸವದಿಯವರು ಯತ್ನಿಸುತ್ತಿದ್ದಾರೆ ಎಂದರು.

ಲಾಕ್‍ಡೌನ್‌ನಲ್ಲಿ ರಾಜ್ಯದಲ್ಲಿರುವ ಎಲ್ಲ ಬಂದ್‌ಯಾಗಿದ್ದರೆ, ತೇರದಾಳ ಕ್ಷೇತ್ರದ ಕೆ.ಎಚ್.ಡಿ.ಸಿ. ನೇಕಾರರ ಕೈಮಗ್ಗಗಳನ್ನು ಚಾಲು ಮಾಡಿಸಿ, ನೇಕಾರರಿಗೆ ಸಂಬಳ ಸಿಗುವಂತೆ ಶಾಸಕ ಸವದಿ ಮಾಡಿದ್ದಾರೆ. ಜಿಲ್ಲೆಯಲ್ಲಿನ ಬೇರೆ ಕ್ಷೇತ್ರಗಳಲ್ಲಿ ನೇಕಾರರು ಮಗ್ಗಗಳನ್ನು ಬಂದ್ ಮಾಡಿ ಸಂಕಷ್ಟ ಅನುಭವಿಸಿದ್ದಾರೆ.  ಕ್ಷೇತ್ರದ ನೇಕಾರರ ಕಷ್ಟಕ್ಕೆ ಸ್ಪಂದಿಸದ ಮಾಜಿ ಸಚಿವೆ ಉಮಾಶ್ರೀಯವರು ಈಗ ನೇಕಾರರ ನೆನೆಪು ಬಂದಿದೆ ಎಂದು ಸಿದ್ದಪ್ಪ ಗಂವಾರ ಹೇಳಿದರು.

Related