ಅಭಿಮಾನಿಗಳ ಮುಂದೆ ಬರಲು ರೆಡಿಯಾದ ತ್ರಿಪುರ ಸುಂದರಿ

ಅಭಿಮಾನಿಗಳ ಮುಂದೆ ಬರಲು ರೆಡಿಯಾದ ತ್ರಿಪುರ ಸುಂದರಿ

ಬೆಂಗಳೂರು: ಕನ್ನಡ ಬಿಗ್ ಬಾಸ್ ಮೂಲಕ ಖ್ಯಾತಿಯನ್ನು ಗಳಿಸಿದ ದಿವ್ಯ ಸುರೇಶ್ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ತ್ರಿಪುರ ಸುಂದರಿ ಧಾರಾವಾಹಿ ಮೂಲಕ ಇನ್ನಷ್ಟು ಜನಪ್ರಿಯತೆಯನ್ನು ಗಳಿಸಿದರು.

ಅವರಿಗ ಮತ್ತೊಂದು ಹೊಸ ಧಾರಾವಾಹಿಯಲ್ಲಿ ಮಧ್ಯಮ ವರ್ಗದ ಹುಡುಗಿಯಂತೆ ಬಿಎಂಟಿಸಿ ಬಸ್ ನಲ್ಲಿ ಓಡಾಡುತ್ತಿರುವ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ರಾಜಕುಮಾರಿ ಪಾತ್ರವನ್ನು ನಿರ್ವಹಿಸುತ್ತಿದ್ದ ದಿವ್ಯ ಸುರೇಶ ರವರು ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿದ್ದರು. ಇದೀಗ ಮತ್ತೊಂದು ಹೊಸ ಧಾರಾವಾಹಿಯ ಮೂಲಕ ಅಭಿಮಾನಿಗಳ ಮನ ಗೆಲ್ಲಲು ದಿವ್ಯ ಸುರೇಶ್ ಅವರು ರೆಡಿಯಾಗಿ ಬಂದಿದ್ದಾರೆ.

ದಿವ್ಯಾ ಸುರೇಶ್ ಅವರ ಅಭಿಮಾನಿ ಬಳಗ ಸಾಕಷ್ಟು ದೊಡ್ಡದಿದೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ಈಗ ಧಾರಾವಾಹಿಗಳಲ್ಲಿ ಮಿಂಚುತ್ತಿದ್ದಾರೆ.

ದಿವ್ಯಾ ಸುರೇಶ್ ಹೊಸ ಧಾರಾವಾಹಿ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಸಿನಿಮಾಗಳಲ್ಲೂ ದಿವ್ಯಾ ನಟಿಸಿದ್ದಾರೆ.

ಹಾಗಾದರೆ ದಿವ್ಯ ಸುರೇಶ್ ಅವರೇ ನಟಿಸುತ್ತಿರುವ ಹೊಸ ಧಾರಾವಾಹಿಯ ಹೆಸರೇನು ಅದು ಯಾವ ಚಾನೆಲ್ ನಲ್ಲಿ ಪ್ರಸಾರವಾಗುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Related