ಮೂವರು ಯೋಧರು ಹುತಾತ್ಮ

ಮೂವರು ಯೋಧರು ಹುತಾತ್ಮ

ನವದೆಹಲಿ : ಲಡಾಕ್ ಸಮೀಪದ ಗಾಲ್ವಾನ್ ಕಣಿವೆಯಲ್ಲಿ ಕಳೆದ ರಾತ್ರಿ ಪರಿಸ್ಥಿತಿ ಉಲ್ಭಣಿಸಿದ್ದು, ಭಾರತ-ಚೀನಾ ರಾಷ್ಟ್ರಗಳ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಚೀನಾ ಸೈನಿಕರ ಗುಂಡಿಗೆ ಓರ್ವ ಮಿಲಿಟರಿ ಅಧಿಕಾರಿ ಹಾಗೂ ಇಬ್ಬರು ಸಿಬ್ಬಂದಿ ಸೇರಿದಂತೆ ಮೂವರು ಬಲಿಯಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಚೀನಾ-ಭಾರತ ಗಡಿಯಲ್ಲಿ ಆತಂಕಕಾರಿ ವಾತಾವರಣ ನಿರ್ಮಾಣವಾಗಿತ್ತು. ಕಳೆದ ರಾತ್ರಿ ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷ ಏರ್ಪಟ್ಟಿದೆ. ಈ ವೇಳೆ, ಚೀನಾ ಪಡೆಯ ಗುಂಡಿಗೆ ಭಾರತೀಯ ಸೇನಾಪಡೆಯ ಮೂವರು ಸಿಬ್ಬಂದಿ ಬಲಿಯಾಗಿದ್ದಾರೆ. ಇನ್ನು ಗಡಿಯಲ್ಲಿ ಪರಿಸ್ಥಿತಿ ಶಾಂತಗೊಳಿಸುವ ಹಿನ್ನೆಲೆ ಭಾರತ-ಚೀನಾ ಸೇನಾಧಿಕಾರಿಗಳು ಸಭೆ ನಡೆಸುತ್ತಿದ್ದಾರೆ.

Related