ರಾಜ್ಯದ ಶಿಕ್ಷಕರೇ ಎಚ್ಚರ!

ರಾಜ್ಯದ ಶಿಕ್ಷಕರೇ ಎಚ್ಚರ!

ಕೊಪ್ಪಳ : ಶಿಕ್ಷಕರನ್ನೇ ಟಾರ್ಗೆಟ್ ಮಾಡಿಕೊಂಡು ಅವರ ಖಾತೆಗೆ ಕನ್ನ ಹಾಕುತ್ತಿರುವ ನೂರಾರು ಪ್ರಕರಣಗಳು ಕಳೆದೆರೆಡು ದಿನಗಳಿಂದ ಜಿಲ್ಲೆಯಲ್ಲಿ ಬೆಳಕಿಗೆ ಬರುತ್ತಿವೆ.

ಶಿಕ್ಷಕರನ್ನೇ ಟಾರ್ಗೆಟ್ ಮಾಡುತ್ತಿರುವ ಖದೀಮರು, ನಾವು ಬ್ಯಾಂಕಿನಿಂದ ಕರೆ ಮಾಡುತ್ತಿದ್ದೇವೆ ಎಂದು ನಂಬಿಸಿ, ಅವರಿಂದ ಹೆಸರು, ಎಟಿಎಂ ಕಾರ್ಡ್ ನಂಬರ್, ಸಿಸಿವಿ ನಂಬರ್ ಎಲ್ಲ ಕೇಳಿ ಒಟಿಪಿಯನ್ನ ಪಡೆದು ಹಣ ಲಪಟಾಯಿಸುತ್ತಿದ್ದಾರೆ.

ಮತಗಟ್ಟೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಪ್ರತಿ ತಿಂಗಳು 5 ಸಾವಿರವನ್ನ ತಹಶೀಲ್ದಾರ್ ಕಚೇರಿಯಿಂದ ನೀಡಲಾಗುತ್ತೆ. ಇದಕ್ಕಾಗಿ ಶಿಕ್ಷಕರು ತಮ್ಮ ಕಾರ್ಯನಿರ್ವಹಿಸುವ ಶಾಲೆಯ ವ್ಯಾಪ್ತಿಯಲ್ಲಿ ಮತದಾರರ ನೋಂದಣಿ, ತಿದ್ದುಪಡಿ ಸೇರಿದಂತೆ ಮೊದಲಾದ ಕಾರ್ಯಗಳನ್ನ ಮಾಡುತ್ತಾರೆ. ಈ ಮತಗಟ್ಟೆಅಧಿಕಾರಿ ಶಿಕ್ಷಕರಿಗೆ ಕರೆ ಬಂದಿವೆ. ಕರೆ ಮಾಡಿ, ನಾವು ಬ್ಯಾಂಕಿನಿಂದ  ಅವರ ಖಾತೆ ಇರುವ ಬ್ಯಾಂಕಿನ ಹೆಸರು ಹೇಳಿದ್ದಾರೆ.

ಕರೆ ಮಾಡಿ ಖಾತೆಗೆ 5 ಸಾವಿರ ಜಮೆ ಮಾಡಬೇಕಾಗಿದೆ. ಇದಕ್ಕಾಗಿ ಪರಿಶೀಲನೆ ಮಾಡಲಾಗುತ್ತಿದ್ದು, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಎಟಿಎಂ ಕಾರ್ಡ್ ನಂಬರ್ ಹಾಗೂ ಸಿವಿಸಿ ನಂಬರ್ ನೀಡಿ ಎಂದಿದ್ದಾರೆ. ನಂತ್ರ ಮೊಬೈಲ್‌ಗೆ ಬರುವ ಒಟಿಪಿಯನ್ನೂ ಸಹ ಹೇಳಿ ಕೇಳಿ ಪಡೆದಿದ್ದಾರೆ

Related