ರಾಜ್ಯದಲ್ಲಿ ಮತ್ತೆ ಹುಲಿ ಉಗುರಿನ ಸದ್ದು

ರಾಜ್ಯದಲ್ಲಿ ಮತ್ತೆ ಹುಲಿ ಉಗುರಿನ ಸದ್ದು

ಚಿಕ್ಕಮಗಳೂರು: ಕಳೆದ ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಹುಲಿ ಉಗುರಿನ ಸುದ್ದಿ ಬಾರಿ ಸದ್ದು ಮಾಡುತ್ತಿತ್ತು.

ಹೌದು, ಬಿಗ್ ಬಾಸ್ ಸ್ಪರ್ಧಿ ಸೇರಿದಂತೆ ರಾಜ್ಯದಲ್ಲಿ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಹುಲಿ ಉಗುರು ಧರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಮತ್ತೆ ಇದೀಗ ಹುಲಿ ಉಗುರಿನ ಪೆಂಡೆಂಟ್ ಮತ್ತು ಹುಲಿ ಉಗುರಿನ ಚರ್ಮವನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಹುಲಿ ತಲೆ, 4 ಉಗುರು, 2 ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ವಿಚಾರ ತಿಳಿದು DFO ರಮೇಶ್ ಬಾಬು ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ, ಹುಲಿ ಅಂಗಾಂಗ ಮಾರಾಟ ಮಾಡಲು ಮುಂದಾಗಿದ್ದ ಸತೀಶ್, ಚಂದ್ರೇಗೌಡ ಎಂಬವರನ್ನು ಬಂಧಿಸಿದ್ದಾರೆ.

ಮೂಡಿಗೆರೆ ಅರಣ್ಯ ಇಲಾಖೆಯ ಕಚೇರಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಂದ ಹುಲಿ ತಲೆ, ಹುಲಿ ಉರುಗರು, ಹಲ್ಲು, ಬೈಕ್ ಸೇರಿದಂತೆ ನಾಲ್ಕು ಮೊಬೈಲ್​ಗಳನ್ನ ಅರಣ್ಯ ಇಲಾಖೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಈ ಹಿಂದೆಯೂ ಹುಲಿ ಅಂಗಾಂಗ ಮಾರಾಟ ಮಾಡುವಾಗ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದರು.

Related