ರಾಗಿಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ರಾಗಿಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ರಾಗಿಯನ್ನು ನಾವು ಪುರಾತನ ಕಾಲದಿಂದಲೂ ನಮ್ಮ ಆಹಾರದಲ್ಲಿ ಬಳಸುತ್ತಾ ಬಂದಿದ್ದೇವೆ. ಈ ರಾಗಿಯನ್ನು ನಾವು ಪ್ರತಿನಿತ್ಯ ನಮ್ಮ ಆಹಾರದಲ್ಲಿ ಬಳಸುವುದರಿಂದ ಹಲವಾರು ಆರೋಗ್ಯಕರ ಲಾಭಗಳನ್ನು ಪಡೆಯಬಹುದು.

ರಾಗಿಯೂ ನಿಜಕ್ಕೂ ರಾಗಿಯನ್ನು ಪೌಷ್ಟಿಕ ಆಹಾರದ ಅಧಿಪತಿ ಎಂದೇ ಹೇಳಬಹುದು. ರಾಗಿ ನಮ್ಮ ಸಂಪ್ರದಾಯಿಕ ಆಹಾರವಾಗಿದ್ದು, ಇದರಲ್ಲಿ ಪೋಷಕಾಂಶಗಳು, ರೋಗನಿರೋಧಕ ಶಕ್ತಿ, ಫೈಬರ್, ಪ್ರೋಟಿನ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಗುಣಗಳಿದೆ. ಜೊತೆಗೆ ಅಧಿಕ ನಾರಿನಾಂಶವಿದೆ. ಇಷ್ಟೇ ಅಲ್ಲ ವಿಟಮಿನ್ ಬಿ, ವಿಟಮಿನ್ ಡಿ, ಮೆಗ್ನಿಸಿಯಂ, ಬಿ ಜೀವಸತ್ವಗಳಿದ್ದು, ರಕ್ತಹೀನ ಸಮಸ್ಯೆಗಳಿಗೂ ರಾಮಬಾಣವಾಗಿದೆ.

ರಾಗಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯ ಕಾಯಿಲೆಗಳನ್ನು ತಡೆಯಬಹುದು, ತೂಕವನ್ನು ಇಳಿಸಿಕೊಳ್ಳಬಹುದು ಮತ್ತು ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆಯಾಂಶವನ್ನು ನಿಯಂತ್ರಿಸಬಹುದು. ರಾಗಿಯು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಸಹ ಸಹಾಯ ಮಾಡುತ್ತದೆ.

ರಾಗಿ ನೋಡಲು ಸಾಸಿವೆಯಂತೆ ಕಾಣುತ್ತದೆ. ರಾಗಿಯನ್ನು ಹಿಟ್ಟು ಅಥವಾ ಪುಡಿ ಮಾಡಿ, ದೋಸೆ, ರೊಟ್ಟಿ, ಇಡ್ಲಿ, ಉಪ್ಮಾ, ಪರಾಠ, ಅಲ್ವಾ, ಬರ್ಫಿ ಇತ್ಯಾದಿಗಳನ್ನು ಮಾಡಲು ಬಳಸಬಹುದು.

ರಾಗಿಯ ಪ್ರಯೋಜನಗಳು

ರಾಗಿಯಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಇದಲ್ಲದೇ ಕಬ್ಬಿಣ ಮತ್ತು ನಾರಿನಂಶವೂ ಹೇರಳವಾಗಿ ದೊರೆಯುತ್ತದೆ. ಇವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಉತ್ತಮ ಜೀರ್ಣಾಂಗ ವ್ಯವಸ್ಥೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಗೋಧಿಯಂತೆ, ರಾಗಿಯು ಅಂಟು-ಮುಕ್ತವಾಗಿದ್ದು, ಸುಲಭವಾಗಿ ಜೀರ್ಣವಾಗುತ್ತದೆ. ಇದಲ್ಲದೇ, ರಾಗಿಯು ಅಂಟು ಅಸಹಿಷ್ಣುತೆ ಹೊಂದಿರುವ ಜನರಿಗೆ ತುಂಬಾ ಸೂಕ್ತವಾದ ಧಾನ್ಯವಾಗಿದೆ.

ಈ ಧಾನ್ಯವು ಮಧುಮೇಹ ರೋಗಿಗಳಿಗೆ ತುಂಬಾ ಉಪಯುಕ್ತವಾಗಿದೆ. ಏಕೆಂದರೆ ರಾಗಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರಾಗಿಯಲ್ಲಿ ನಾರಿನಂಶ ಹೆಚ್ಚಿದ್ದು, ಹೊಟ್ಟೆಯನ್ನು ಹೆಚ್ಚು ಕಾಲ ತುಂಬಿದಂತೆ ಮಾಡುತ್ತದೆ.

ರಾಗಿಯಲ್ಲಿರುವ ಆಹಾರದ ನಾರುಗಳು HDL ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

 

Related