ಸ್ಯಾಂಡಲ್ ವುಡ್ ನಟಿಯ ಅದ್ದೂರಿ ಸೀಮಂತ

ಸ್ಯಾಂಡಲ್ ವುಡ್ ನಟಿಯ ಅದ್ದೂರಿ ಸೀಮಂತ

ಬೆಂಗಳೂರು: ಕನ್ನಡ ಚಿತ್ರರಂಗದ ಕ್ಯಾತನ ನಟಿ ಅತಿಥಿ ಪ್ರಭುದೇವ ಅವರ ಸೀಮಂತ ಕಾರ್ಯ ಅದ್ದೂರಿಯಾಗಿ ನೆರವೇರಿತು. ಈ ಸೀಮಂತ ಕಾರ್ಯಕ್ಕೆ ಸಿನಿಮಾ ರಂಗ ಸೇರಿದಂತೆ ಇನ್ನಿತರ ಗಣ್ಯ ವ್ಯಕ್ತಿಗಳು ಅತಿಥಿ ಪ್ರಭುದೇವ ಅವರ ಸೀಮಂತ ಕಾರ್ಯಕ್ಕೆ ಭಾಗಿಯಾಗಿದ್ದರು.

ಇನ್ನು ಸೀಮಂತ ಕಾರ್ಯಕ್ರಮದ ಫೋಟೋಗಳನ್ನು ಅತಿಥಿ ಪ್ರಭುದೇವರು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ಶುಭಕೋರಿದ್ದಾರೆ.

ಹೌದು, ಕನ್ನಡದ ಖ್ಯಾತ ನಟಿ ಅದಿತಿ ಪ್ರಭುದೇವ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷ ಜನವರಿ 1ರಂದು ಅವರು ಪ್ರೆಗ್ನೆನ್ಸಿ ಸುದ್ದಿ ನೀಡಿದ್ದರು. ಈಗ ಅವರ ಮನೆಯಲ್ಲಿ ಸಂಭ್ರಮದಿಂದ ಸೀಮಂತ ಶಾಸ್ತ್ರ ಮಾಡಲಾಗಿದೆ. ಅದಿತಿ ಪ್ರಭುದೇವ ಅವರ ಸೀಮಂತ ಶಾಸ್ತ್ರಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿ ಶುಭ ಕೋರಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಶೀಘ್ರದಲ್ಲೇ ಅದಿತಿ ಪ್ರಭುದೇವ ಹಾಗೂ ಯಶಸ್​ ಪಾಟ್ಲಾ  ದಂಪತಿಯ ಮನೆಗೆ ಮಗುವಿನ ಆಗಮನ ಆಗಲಿದೆ.

2022ರ ನವೆಂಬರ್​ನಲ್ಲಿ ಉದ್ಯಮಿ ಯಶಸ್​ ಜೊತೆ ಅವರ ವಿವಾಹ ನೆರವೇರಿತ್ತು. ಈಗ ತಾಯಿ ಆಗುತ್ತಿರುವ ಸಂಭ್ರಮದಲ್ಲಿ ಅದಿತಿ ಪ್ರಭುದೇವ ಇದ್ದಾರೆ.

ಮದುವೆ ಬಳಿಕ ಅದಿತಿ ಪ್ರಭುದೇವ ಅವರು ಸಿನಿಮಾ ಒಪ್ಪಿಕೊಳ್ಳುವುದು ಕಡಿಮೆ ಆಯಿತು. ಪ್ರಗ್ನೆಂಟ್​ ಆದ ನಂತರ ಅವರು ಸಂಪೂರ್ಣವಾಗಿ ಆರೋಗ್ಯದ ಕಡೆಗೆ ಗಮನ ನೀಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಅವರು ಸಿನಿಮಾ ಕೆಲಸಗಳಿಂದ ಸದ್ಯಕ್ಕೆ ಅಂತರ ಕಾಯ್ದಕೊಂಡಿದ್ದಾರೆ. ಅವರ ಸೀಮಂತ ಶಾಸ್ತ್ರಕ್ಕೆ ನಟ ಶರಣ್​, ಸಂಗೀತ ನಿರ್ದೇಶಕ ಗುರುಕಿರಣ್​ ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ.

 

Related