ಸಾರ್ವಜನಿಕರೇ ಕೈ ಜೋಡಿಸಿ

ಸಾರ್ವಜನಿಕರೇ ಕೈ ಜೋಡಿಸಿ

ಗಜೇಂದ್ರಗಡ : ಪೈಪೋಟಿಗಳ ನಡುವೆಯೂ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿರುವ ಕಾಲಕಾಲೇಶ್ವರ ವಿವಿಧೋದ್ದೇಶ ಸಂಘವಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಜನರಿಗೆ ಅನುಕೂಲಕರವಾಗಿದೆ. ಲಾಭದಾಯಕದತ್ತ ಸಾಗುತ್ತಿರುವುದು ನಮ್ಮ ಸಂಘವಾಗಿದೆ. ಇದೇ ರೀತಿ ಸಾರ್ವಜನಿಕರು ನಮ್ಮ ಜೊತೆ ಕೈ ಜೋಡಿಸಿ ಸಹಕಾರಿ ಸಂಘವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಳ್ಳಬೇಕು ಎಂದು ಮಂಜುಳಾ ಈಶ್ವರಪ್ಪ ರೇವಡಿ ಹೇಳಿದರು.

ಪಟ್ಟಣದ ಮೈಸೂರು ಮಠದಲ್ಲಿ ಕಾಲಕಾಲೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘದ 8ನೇ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ಸಂಘದ ಆಡಳಿತವೂ ಪಾರದರ್ಶಕವಾಗಿದೆ. ಸಂಘದ ಅಭಿವೃದ್ಧಿಗೆ ಸಹಕರಿಸಿದ ಠೇವಣಿದಾರರಿಗೆ, ಸದಸ್ಯೆರಿಗೆ, ಮಾರ್ಗದರ್ಶನ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಇದೇ ರೀತಿ ತಮ್ಮಲ್ಲೇರ ಸಹಕಾರ ಸಂಘದ ಮೇಲೆ ಇರಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಳಿಕ ಟಿ.ಎಸ್ ರಾಜೂರ, ಸಿದ್ದ ಲಿಂಗಪ್ಪ ಕನಕೇರಿ, ಐ.ಎ ರೇವಡಿ ಎಮ್.ಸಿ ಹಡಪದ, ಶಿವಾನಂದ ಮಠದ, ರಾಜೂ ಮಿಸ್ಕಿನ್, ಎ.ವಿ ಹಾದಿಮನಿ, ಪ್ರಭಾವತಿ ಸಂಗಟಿ, ರೇವಣಪ್ಪ ಮಳಗಿ, ಮಲ್ಲಿಕಾರ್ಜುನ ಬಡಿಗೇರ ಸಿ.ಎಸ್.ನೀರಲಗಿ, ಕೆ.ಎಸ್.ಚನ್ನಿ, ಕಮಲೇಶ ಪಮ್ಮಾರ, ನಿಜಾಮುದ್ದಿನ ಒಂಟಿ, ರಾಘವೇಂದ್ರ ಮಾಂಡ್ರೆ ಸಿದ್ದಪ್ಪ ರೇವಡಿ, ಪ್ರವೀಣ ರೇವಡಿ ಪರಶುರಾಮ ಜೋಗಿ, ರಾಜಾಭಕ್ಷಿ ನಧಾಪ್, ಮಂಜುಳಾ ಹೊನಕೇರಿ, ಹುಚ್ಚಪ್ಪ ಹಾವೇರಿ, ಕೆ.ಜಿ.ಸಂಗಟಿ ಸೇರಿದಂತೆ ಮತ್ತಿತ್ತರರಿದ್ದರು.

Related