ಕೊತ್ತಂಬರಿ ಬೆಲೆ ಪಾತಳಕ್ಕೆ, ಕಂಗಾಲಾದ ರೈತ..!

  • In State
  • August 25, 2023
  • 192 Views
ಕೊತ್ತಂಬರಿ ಬೆಲೆ ಪಾತಳಕ್ಕೆ, ಕಂಗಾಲಾದ ರೈತ..!

ಗದಗ: ರಾಜ್ಯದಲ್ಲಿ ಸರಿಯಾಗಿ ಮಳೆ ಬಾರದ ಕಾರಣ ದೇಶಕ್ಕೆ ಅನ್ನ ನೀಡುವ ರೈತ ದಿನ ನಿತ್ಯ ಮುಗಿಲು ನೋಡುವ ಸ್ಥಿತಿ ಬಂದಿದೆ, ಮಳೆಯಿಲ್ಲ, ಬೆಳೆದ ಸಗಟಿಗೆ ಮಾರ್ಕೆಟ್ನಲ್ಲಿ ನಿಗದಿತ ಬೆಲೆ ಇಲ್ಲ. ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಬೆಳವಣಿಕೆ ಗ್ರಾಮದ ಸುತ್ತಮುತ್ತಲಿನಲ್ಲಿ ಬೆಳೆದ ನೂರಾರು ಎಕರೆ ಕೊತ್ತಂಬರಿ ಬೆಳೆಯನ್ನು  ರೈತರು ನಾಶ ಮಾಡಿದ್ದಾರೆ. ಕಳೆದ ವರ್ಷ ಒಂದು ದಿಂಡು ಸೊಪ್ಪಿಗೆ 120, ರಿಂದ 140 ರೂ ವರೆಗೆ. ಮಾರಾಟವಾಗಿತ್ತು. ಹಾಗಾಗಿ ಈ ವರ್ಷವೂ ಅದೇ ರೀತಿ ಲಾಭ ಸಿಗಬಹುದೆಂಬ ನಿರೀಕ್ಷೆಯಲ್ಲಿ ಈ ಭಾಗದ ರೈತರು ಅತೀ ಹೆಚ್ಚಾಗಿ ಕೊತ್ತೊಂಬರಿ ಬೆಳೆಯನ್ನು ಬೆಳೆದಿದ್ದರು.

ಆದರೆ ಮಾರ್ಕೆರ್ಟ್ನಲ್ಲಿ ಸರಿಯಾದ ಬೆಲೆ ಸಿಗದೆ, ಒಂದು ಕಟ್ಟು ಕೊತ್ತಂಬರಿ ಕೇವಲ 1 ರೂ. ಮಾತ್ರ ಖರೀದಿ ಆಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ.

ರೈತ ಕೋತಂಬರಿ ಸೊಪ್ಪು ಬೆಳೆಯಲು ಒಂದು ಎಕರೆಗೆ ಸರಿ ಸುಮಾರು 10 ರಿಂದ 20 ಸಾವಿರ ರೂಪಾಯಿಗಳನ್ನು ಸಾಲ ಸೂಲ ಮಾಡಿ ಬೆಳೆದಿರುತ್ತಾರೆ.  ಉತ್ತಮ ಬೆಲೆ ಸಿಕ್ಕಿದ್ದರೆ 50 ರಿಂದ 80 ಸಾವಿರ ರೂ. ವರೆಗೆ ಲಾಭ ಸಿಗುತಿತ್ತು. ಆದರೆ ಸೊಪ್ಪು ಬೆಳೆಯಲು ಕೂಲಿ ಕೆಲಸ ಮಾಡಿದವರ ಖರ್ಚು ಕೂಡ ಎದುರಾಗಿದೆ.

ಇನ್ನು ನಾವು ಮನೆಯವರೆಲ್ಲರೂ ಹಗಲು ರಾತ್ರಿ ಕೆಲಸ ಮಾಡಿದ್ದರ ಕೂಲಿ ಕೂಡ ಬಂದಿಲ್ಲ, ಹತ್ತಾರು ಎಕರಿಗೆ ಸಾಲ ಮಾಡಿ ಕೊತ್ತಂಬರಿ ಸೊಪ್ಪಿನ ಬೆಳೆಯನ್ನು ಬೆಳೆದಿದ್ದೇವೆ, ನಮ್ಮಂತ ಬಡ ರೈತರ ಗತಿಯೇನು, ಸರ್ಕಾರ ಏನಾದರೂ ಸಹಾಯ ಮಾಡುವರೋ ಎಂದು ಬಕ ಪಕ್ಷಿಯಂತೆ ಕಾಯುವ ದುಸ್ಥಿತಿ ಬಂದೋದಗಿದೆ.

ವರದಿಗಾರ

ಎ.ಚಿದಾನಂದ,ವಿಜಯನಗರ.

Related