ನೂತನ ಸಚಿವರು ಬಹಳ ಕಷ್ಟ ಪಟ್ಟಿದ್ದಾರೆ: ಎಂಟಿಬಿ

  ನೂತನ ಸಚಿವರು ಬಹಳ ಕಷ್ಟ ಪಟ್ಟಿದ್ದಾರೆ: ಎಂಟಿಬಿ

ಕೆ ಆರ್ ಪುರಂ, ಫೆ. 06: ಸಂಪುಟ ರಚನೆಯ ನೂತನ ಸಚಿವರಿಗೆ ಶುಭಾಶಯ ತಿಳಿಸಿದ ಎಂಟಿಬಿ. ಸಂಪುಟ ರಚನೆ ಕಾರ್ಯಕ್ರಮಕ್ಕೆ ನಮಗೂ ಆಹ್ವಾನ ನೀಡಿದ್ದಾರೆ ನಾನು ಹೋಗುತ್ತೇನೆ. ನಮ್ಮಲ್ಲಿ ಯಾವುದೇ ಅಸಮಧಾನವಿಲ್ಲ. ಈಗ ಸಚಿವರಾಗುತ್ತಿರುವಂತಹ ನಮ್ಮ ಸ್ನೇಹಿತರು ಸಹ ಬಹಳ ದಿನಗಳಿಂದ ತುಂಬಾ ನೊಂದಿದ್ದರು. ಸಾಕಷ್ಟು ಕಷ್ಟ ಪಟ್ಟಿದ್ದಾರೆ ಇಂದು ಅವರು ಸಚಿವ ಸಂಪುಟದಲ್ಲಿ ಸೇರ್ಪಡೆಯಾಗುತ್ತಿರುವುದು ಖುಷಿ ತಂದಿದೆ ಎಂದು ತಿಳಿಸಿದರು.

ನಮಗೆ ಸಿಎಂ ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ. ನಮಗೂ ಆದಷ್ಟು ಬೇಗ ಒಳ್ಳೆಯ ಸ್ಥಾನಮಾನ ಕೊಡುತ್ತಾರೆ ಎನ್ನುವಂತಹ ನಂಬಿಕೆ ಇದೆ. ಕ್ಷೇತ್ರದ ಜನತೆಗೆ ಯಾರಿಗೂ ನೋವಿಲ್ಲ ಆದ್ರೆ ಇಂದಿನ ಸಚಿವ ಸಂಪುಟದಲ್ಲಿ ನಾನು ಸಹ ಸೇರ್ಪಡೆಯಾಗಬೇಕಿತ್ತು ಎನ್ನುತ್ತಿದ್ದಾರೆ. ನನ್ನನ್ನು ಸಹ ಮುಂದಿನ ದಿನಗಳಲ್ಲಿ ಸಚಿವನನ್ನಾಗಿ ಮಾಡುತ್ತಾರೆ. ಮೂಲ ಬಿಜೆಪಿಯವರಿಗೆ ಅಸಮಾಧಾನವಿರುವ ಬಗ್ಗೆ ಯಡಿಯೂರಪ್ಪ ನವರು ಎಲ್ಲವನ್ನೂ ಸರಿಪಡಿಸುತ್ತಾರೆ. ಯಾವುದೇ ಭಿನ್ನಾಭಿಪ್ರಾಯ ಗೊಂದಲಗಳನ್ನು ಸಿಎಂ ಯಡಿಯೂರಪ್ಪ ನಿವಾರಿಸುತ್ತಾರೆ. ಬಿಜೆಪಿಗೆ ಮತ್ತಷ್ಟು ಶಕ್ತಿ ಬರುತ್ತದೆ ಎಲ್ಲಾ ಕಾರ್ಯಕರ್ತರು ಮುಖಂಡರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತೇವೆ ಎಂದು ಗರುಡಚಾರ್ ಪಾಳ್ಯ ತಮ್ಮ ಗೃಹ ಕಚೇರಿ ಬಳಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ.

Related