ಮೊಬೈಲ್‍ಸಲುವಾಗಿ ಬೆಂಕಿಹಚ್ಚಿಕೊಂಡ ವ್ಯಕ್ತಿ!

ಮೊಬೈಲ್‍ಸಲುವಾಗಿ ಬೆಂಕಿಹಚ್ಚಿಕೊಂಡ ವ್ಯಕ್ತಿ!

ನವದೆಹಲಿ : ಗ್ರಾಹಕ ಸೇವಾ ಸಿಬ್ಬಂದಿ ತಮ್ಮ ಕೆಟ್ಟುಹೋಗಿರುವ ಸ್ಮಾರ್ಟ್ಫೋನ್ ಅನ್ನು ಬದಲಿಸಿ ಕೊಟ್ಟಿಲ್ಲ ಹಾಗೂ ಕೆಟ್ಟದಾಗಿ ನಡೆಸಿಕೊಂಡರು ಎಂಬ ಕಾರಣದಿಂದ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ನಡೆದಿದೆ.

40 ವರ್ಷದ ಭೀಮ್ ಸಿಂಗ್ ಎಂಬುವವರು ಇಂಥದ್ದೊಂದು ಕೃತ್ಯ ಎಸಗಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಭೀಮ್‌ಸಿಂಗ್ ಅವರು ತಮ್ಮ ಸೊಸೆಗಾಗಿ ಒಂದು ಪ್ರತಿಷ್ಠಿತ ಕಂಪೆನಿಯ ಸ್ಮಾರ್ಟ್ಫೋನ್ ಖರೀದಿ ಮಾಡಿದ್ದರು. ಆಕೆಯ ಆನ್‌ಲೈನ್ ಕ್ಲಾಸ್‌ಗಾಗಿ ಈ ಫೋನ್ ಖರೀದಿ ಮಾಡಲಾಗಿತ್ತು.

ದೆಹಲಿಯ ರೋಹಿಣಿಯ ಎಂ2ಕೆ ಮಾಲ್‌ನಲ್ಲಿರುವ ಸೇವಾ ಕೇಂದ್ರಕ್ಕೆ ಧಾವಿಸಿದ ಅವರು ಫೋನ್ ರಿಪೇರಿ ಮಾಡಿಕೊಡುವಂತೆ ಕೋರಿಕೊಂಡರು. ಆದರೆ ಸೇವಾ ಕೇಂದ್ರ ಫೋನ್ ರಿಪೇರಿ ಮಾಡಿಕೊಡಲು ಸಿದ್ಧವಿರಲಿಲ್ಲ. ಅದೂ ಅಲ್ಲದೆ ಅವರು ಭೀಮ್ ಸಿಂಗ್ ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದರು ಎನ್ನಲಾಗಿದೆ.

ನೀವು ಹೀಗೆಲ್ಲಾ ನಡೆದುಕೊಳ್ಳಬೇಡಿ ಎಂದು ಭೀಮ್‌ಸಿಂಗ್ ಹೇಳಿದ್ದರಂತೆ. ನೀವು ಹೀಗೆಲ್ಲಾ ಸುತ್ತಿಸುವ ಸಾಯುವುದೇ ಒಳ್ಳೆಯದು ಎಂದರAತೆ. ಆಗ ಆ ಸಿಬ್ಬಂದಿ ನಿಮಗೆ ಅದು ಒಳ್ಳೆಯದು ಎಂದೆನಿಸಿದರೆ ಹೋಗಿ ಬೆಂಕಿ ಹಚ್ಚಿಕೊಳ್ಳಿ ಎಂದಿದ್ದಾರೆ.

Related