ಸಾಲ ಅಭಿಯಾನ ಆರಂಭ

ಸಾಲ ಅಭಿಯಾನ ಆರಂಭ

ಧಾರವಾಡ : ಆರ್ಥಿಕ ಬೇಡಿಕೆ ಈಡೇರಿಸುವಲ್ಲಿ ತನ್ನ ಕಾರ್ಯಕ್ಷೇತ್ರದ ರೈತರನ್ನು ಸೆಪ್ಟೆಂಬರ್ ತಿಂಗಳ ಅಂತ್ಯದ ಒಳಗಾಗಿ ತಲುಪಲು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಯೋಜನೆ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ “ವಿಕಾಸ ವರ್ಷ” ಎಂಬ ವಿಶೇಷ ಕೃಷಿ ಸಾಲ ಅಭಿಯಾನ ಪ್ರಾರಂಭಿಸಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಪಿ. ಗೋಪಿಕೃಷ್ಣ ತಿಳಿಸಿದರು.

ಕೃಷಿ ಸಾಲ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಈವರೆಗೆ ಬ್ಯಾಂಕ್ ಸಾಲದಿಂದ ದೂರವಿರುವ ರೈತರ ಸಮೀಕ್ಷೆ ನಡೆದಿದ್ದು, ಕಿಸಾನ್ ಕ್ರೆಡಿಟ್ ಕಾರ್ಡ್ದಲ್ಲಿ ಕೃಷಿ ಸಾಲವಾಗಿ 3700 ಕೋಟಿ ರೂ. ವಿತರಿಸಲು ಬ್ಯಾಂಕು ಯೋಜನೆ ರೂಪಿಸಿದೆ. ಖಾತೆ ಇಲ್ಲ ಎಂಬ ಸಣ್ಣ ಕಾರಣಕ್ಕೆ ಸಾಲ ನಿರಾಕರಿಸಬಾರದೆಂದು. ಈ ಸಂಬಂಧ ರೈತಕೂಟ, ಸ್ವಯಂ ಸೇವಾ ಸಂಸ್ಥೆ ಹಾಗೂ ಕೃಷಿ ಇಲಾಖೆಗಳ ಸಹಾಯ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಕೃಷಿರಂಗಕ್ಕೆ ಸಾಲ ಸೌಲಭ್ಯದ ಮೊತ್ತ ಹೆಚ್ಚಿಸಲು ಬ್ಯಾಂಕ್ ತನ್ನದಾದ ಕೃಷಿ ಸಾಲ ಯೋಜನೆಯನ್ನು  ರೂಪಿಸಿದೆ. ಹಾಗೆಯೇ ಬೆಳೆ ಸಾಲ ವಿತರಣೆಗೆ ಚುರುಕು ನೀಡಲು ಮತ್ತು ಸಕಾಲಿಕ ಪರಾಮರ್ಶೆಗೆ ಬ್ಯಾಂಕು ಪ್ರತಿ ಪ್ರಾದೇಶಿಕ ಕಾರ್ಯಾಲಯದಲೂ ಕೃಷಿಕರ ಅಭ್ಯುದಯವನ್ನು ಗಮನದಲ್ಲಿಟ್ಟು ಬ್ಯಾಂಕು ತನ್ನ ಸಾಲ ನೀತಿಯನ್ನು ಪರಿಷ್ಕರಿಸಿದ್ದು ರೈತರು ಸಾಲ ಸಂಬAಧಿ ಸಂಶಯಗಳನ್ನು ಪರಿಹರಿಸಿಕೊಳ್ಳಲ್ಲು ಓರ್ವ ನೋಡಲ್ ಅಧಿಕಾರಿ ನೇಮಿಸಿದೆ ಎಂದು ತಿಳಿಸಿದರು.

Related