ಸ್ವಪಕ್ಷಿಯರಿಂದಲೇ ಅವಿಶ್ವಾಸ ಮಂಡನೆ

ಸ್ವಪಕ್ಷಿಯರಿಂದಲೇ ಅವಿಶ್ವಾಸ ಮಂಡನೆ

ಹಾನಗಲ್ :  ಹಾನಗಲ್ ತಾಲೂಕು ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಅವಿಶ್ವಾಸ ಮಂಡನೆ ಸ್ವಪಕ್ಷಿಯರಿಂದಲೇ ನಿರ್ಣಯವಾಗಿದ್ದು, ಅಧ್ಯಕ್ಷರಾಗಿದ್ದ ಸಿದ್ದಪ್ಪ ಹಿರಗಪ್ಪನವರ ಹಾಗೂ ಉಪಾಧ್ಯಕ್ಷರಾಗಿದ್ದ ಸರಳಾ ಜಾಧವ ತಮ್ಮ ಸ್ಥಾನದಿಂದ ನಿರ್ಗಮಿಸಿದರು.

ಶುಕ್ರವಾರ ತಾಲೂಕು ಪಂಚಾಯತಿ ಸಭಾಭವನದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಅವಿಶ್ವಾಸ ಮಂಡನೆಯಲ್ಲಿ ಕಾಂಗ್ರೆಸ್ ಪಕ್ಷದ 20 ಸದಸ್ಯರು ಪಾಲ್ಗೊಂಡಿದ್ದರು.

19 ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಗೆ ಪರವಾಗಿ ಮತ ಚಲಾಯಿಸಿದರು. ಹೀಗಾಗಿ ಅವಿಶ್ವಾಸ ನಿರ್ಣಯ ಗೆಲುವು ಕಂಡಿತು. ಬಿಜೆಪಿಯ ಮೂವರು ತಾಪಂ ಸದಸ್ಯರು ಅವಿಶ್ವಾಸ ನಿರ್ಣಯದಲ್ಲಿ ಪಾಲ್ಗೊಳ್ಳಲಿಲ್ಲ.

ಅವಿಶ್ವಾಸ ನಿರ್ಣಯಕ್ಕೆ ನವೆಂಬರ್ 3 ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ನ. 23 ರಂದು ಜಿಲ್ಲಾಧಿಕಾರಿಗಳು ತಾಪಂ ಸದಸ್ಯರಿಗೆ ಪಾಲ್ಗೊಳ್ಳುವಂತೆ ಪತ್ರ ರವಾನಿಸಿ ಡಿ.4 ರಂದು ಅವಿಶ್ವಾಸ ನಿರ್ಣಯದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ಶುಕ್ರವಾರ ನಡೆದ ಅವಿಶ್ವಾಸ ಮಂಡನೆ ಜಯಿಸಿತು.

**

ನಾನು ಕಟ್ಟಾ ಕಾಂಗ್ರೆಸ್ಸಿಗ, ನನ್ನ ಅವಧಿ ಪೂರ್ಣಗೊಳ್ಳದೆ ಕಾಂಗ್ರೆಸ್ಸಿಗರೇ ಅವಿಶ್ವಾಸ ಮಾಡಿದ್ದು ವಿಷಾದದ ಸಂಗತಿ. ನನಗೆ ಬಣ ರಾಜಕಾರಣ ಗೊತ್ತಿಲ್ಲ. ನಾನು ಮಾಜಿ ಸಚಿವ ಮನೋಹರ ತಹಶೀಲ್ದಾರ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಅವರ ಜೊತೆಗೆ ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದೆ. ಅವಿಶ್ವಾಸ ಮಂಡನೆಗೆ ಕಾರಣವಾಗಿದ್ದು. ನಾನು ಅಧಿಕಾರಕ್ಕೆ ಆಸೆ ಪಟ್ಟವನಲ್ಲ. ಅಭಿವೃದ್ಧಿಗೆ ಶ್ರಮಿಸಿದವನು.

– ಸಿದ್ದಪ್ಪ ಹಿರಗಪ್ಪನವರ, ತಾಪಂ ಮಾಜಿ ಅಧ್ಯಕ್ಷ.

Related