ವಿದ್ಯಾರ್ಥಿಗಳನ್ನು ಹೊರ ಹಾಕಿದ ಸರ್ಕಾರಿ ಹಾಸ್ಟೆಲ್!

ವಿದ್ಯಾರ್ಥಿಗಳನ್ನು ಹೊರ ಹಾಕಿದ ಸರ್ಕಾರಿ ಹಾಸ್ಟೆಲ್!

ಗಂಗಾವತಿ : ಕರೋನಾ ಎರಡನೇ ಅಲೆ ಎಂದು ಹೇಳಿ ಹಾಸ್ಟೆಲ್ ಗಳಿಂದ ಪರೀಕ್ಷೆ ಇದ್ದರೂ ವಿದ್ಯಾರ್ಥಿಗಳನ್ನು ಹೊರ ಹಾಕಿದ ಬಿ.ಸಿ.ಎಂ.
ಇಲಾಖೆ ಸಮಾಜ ಕಲ್ಯಾಣ . ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯವೈಖರಿಯನ್ನು ಗಂಗಾವತಿ ಎಸ್‌ಎಫ್‌ಐ ತಾಲೂಕು ಘಟಕ ಖಂಡಿಸಿದೆ.

ರಾಜ್ಯದಲ್ಲಿ ಕರೋನಾ ಎರಡನೇ ಹಾವಳಿ ಜಾಸ್ತಿಯಾಗುತ್ತಿದೆ ಎಂದು ಹೇಳಿ ಸರ್ಕಾರ ಮೇ 4 ರವರೆಗೆ ಶಾಲಾ, ಕಾಲೇಜ್ ಬಂದ್ ಮಾಡಿ ಆದೇಶ ಹೋರಡಿಸಿದ ಹಿನ್ನೆಲೆಯಲ್ಲಿ, ಅನೇಕ ವೃತ್ತಿಪರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಯನ್ನು ಮುಂದೂಡಿಲ್ಲ. ಪರೀಕ್ಷೆ ಗಳು ನಡೆಯುತ್ತಿವೆ. ಗಂಗಾವತಿಯ ಸರ್ಕಾರ ಎಂಜಿನಿಯರಿಂಗ್ ಕಾಲೇಜ್‌ನ ವಿದ್ಯಾರ್ಥಿಗಳಿಗೆ ಮೇ ತಿಂಗಳ 15 ರವರೆಗೆ ಪರೀಕ್ಷೆ ನಡೆಯುತ್ತಿದ್ದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಬಿ.ಸಿ.ಎಂ.ಇಲಾಖೆ ಅಲ್ಪ ಸಂಖ್ಯಾತ ಇಲಾಖೆಯಲ್ಲಿ ಹಾಸ್ಟೆಲ್ ನಲ್ಲಿ ಇರುವ ವಿದ್ಯಾರ್ಥಿಗಳನ್ನು ಏಕಾಏಕಿ ಹೊರಗಡೆ ಹಾಕಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಊರಿಗೆ ಹೋಗದೆ, ಖಾಸಗಿ ಪಿಜಿ ಮೊರೆ ಹೋಗಿದ್ದಾರೆ, ಮತ್ತು ಕೆಲ ವಿದ್ಯಾರ್ಥಿಗಳಿಗೆ ಪಿಜಿ ಸಿಗದೇ ಕಂಗಾಲಾಗಿದ್ದಾರೆ.

ಹಾಗಾಗಿ ಸರ್ಕಾರ ಕೋವಿಡ್ ನಿಯಮ ಪಾಲಿಸಿ, ಪರೀಕ್ಷೆ ಇರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಲು ಬಿ.ಸಿ.ಎಂ ಇಲಾಖೆ ಆಯುಕ್ತರು ಆದೇಶ ಮಾಡಿದ್ದಾರೆ, ಆದರೆ ಈ ಆದೇಶ ಕೊಪ್ಪಳದ ಹಿಂದುಳಿದ ವರ್ಗ ಗಳ ಕಲ್ಯಾಣ ಅಧಿಕಾರಿಗಳಿಗೆ ತಿಳಿದರೂ ಪರೀಕ್ಷೆ ಇರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗೆ ಕರೆಸಿಕೊಂಡಿಲ್ಲ, ಅನೇಕ ಬಡ ವಿದ್ಯಾರ್ಥಿಗಳು ಹಾಸ್ಟೆಲ್ ನಿಂದ ಹೊರ ಹಾಕಿದ್ದಕ್ಕೆ ಪರದಾಡುತ್ತಿದ್ದಾರೆ.

ಹಾಗಾಗಿ ಕೂಡಲೇ ವೃತ್ತಿಪರ ಡಿಪ್ಲೊಮಾ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಗೆ ಸೇರಿಸಿಕೊಂಡು ಕೋವಿಡ್ ನಿಯಮ ಪಾಲಿಸಿಬೇಕು. ಬಡ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಗೆ ಸೇರಿಸಿ ಕೊಳ್ಳದೇ, ಹಾಸ್ಟೆಲ್ ಮುಚ್ಚಿರುವ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಎಸ್‌ಎಫ್‌ಐ ಸಂಘಟನೆಯ ತಾಲೂಕು ಅಧ್ಯಕ್ಷ ಗ್ಯಾನೇಶ ಕಡಗದ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಶಿವುಕುಮಾರ,ಹನುಮಂತ.ನಾಗರಾಜ. ಶರೀಪ್, ಟಿಪ್ಪು ಇತರರು ಇದ್ದರು.

Related