ಪುಸ್ತಕ ಬರೆದ ಬಾಲಕಿ..!

ಪುಸ್ತಕ ಬರೆದ ಬಾಲಕಿ..!

ತನ್ನ ಏಳನೇ ವಯಸ್ಸಿಗೇ ಸಾಹಿತ್ಯ ಜ್ಞಾನವನ್ನು ಮೆರೆದಿರುವ ಅಭಿಜಿತಾ ಗುಪ್ತಾ ಹೆಸರಿನ ಬಾಲಕಿಯೊಬ್ಬಳು ‘Happiness All Around’ ಎಂಬ ಹೆಸರಿನ ಪುಸ್ತಕವೊಂದನ್ನು ಬರೆದಿದ್ದಾಳೆ. ಈ ಪುಸ್ತಕವನ್ನು ಆಕ್ಸಫರ್ಡ್ ಬುಕ್ ಸ್ಟೋರ್‌ನ ಮಕ್ಕಳ ವಿಭಾಗವಾದ ಆಕ್ಸ್ಫರ್ಡ್ ಜೂನಿಯರ್ ಬಿಡುಗಡೆ ಮಾಡಿದೆ.

ಪದ್ಮಭೂಷಣ ಪುರಸ್ಕೃತ ರಾಷ್ಟ್ರಕವಿ ಮೈಥಾಲಿಶರಣ್ ಗುಪ್ತಾ ಹಾಗೂ ಸಂತಕವಿ ಸಿಯಾರಾಮ್ ಶರಣ್ ಮರಿ ಮೊಮ್ಮಗಳು ಈ ಅಭಿಜಿತಾ. ಕಥೆಗಳು ಹಾಗೂ ಕವನಗಳನ್ನು ಒಳಗೊಂಡ ಪುಸ್ತಕವೊಂದನ್ನು ಈ ಬಾಲಕಿ ಬರೆದಿದ್ದಾಳೆ. ತನ್ನ ಐದನೇ ವಯಸ್ಸಿನಲ್ಲೇ ಬರೆಯಲು ಆರಂಭಿಸಿದ್ದಳು ಅಭಿಜಿತಾ.

ತನ್ನ ಕುಟುಂಬದ ಮೂರನೇ ತಲೆಮಾರಿನ ಬರಹಗಾರ್ತಿಯಾದ ಅಭಿಜಿತಾ, ಎರಡನೇ ತರಗತಿಯಲ್ಲಿ ಓದುತ್ತಿದ್ದಾಳೆ. ಫೇಸ್ಬುಕ್‌ನಲ್ಲಿ ತನ್ನದೇ ಪೇಜ್ ‘Abhijita Gupta”The little poet” ಮೂಲಕ ಈ ಪುಟಾಣಿ ತನ್ನ ಸಣ್ಣ ಕವನ ಸಂಕಲನಗಳು ಹಾಗೂ ಕಥೆಗಳನ್ನು ಹಂಚಿಕೊಳ್ಳುತ್ತಾಳೆ.

Related