ಕುವೆಂಪುರವರ ಕಾವ್ಯದಲ್ಲಿ ಮಾನವ ಕುಲದ ಉನ್ನತಿ

ಕುವೆಂಪುರವರ ಕಾವ್ಯದಲ್ಲಿ ಮಾನವ ಕುಲದ ಉನ್ನತಿ

ಗಜೇಂದ್ರಗಡ : ಸ್ಮಶಾನ ಕುರುಕ್ಷೇತ್ರಂ ರಾಷ್ಟ್ರಕವಿ ಕುವೆಂಪು ಅವರು 1931ರಲ್ಲಿ ರಚಿಸಿರುವ ನಾಟಕ, ಮಹಾ ಯುದ್ಧದ ಪರಿಣಾಮ ಬಿಚ್ಚಿಡುತ್ತದೆ. ಪ್ರತಿಮಾ ವಿಧಾನದಿಂದ ಸೃಷ್ಟಿಯಾಗಿದ್ದು ಯುದ್ಧದ ಪರಿಣಾಮ ತೀವ್ರತರವಾಗಿ ಕಟ್ಟಿಕೊಡುವ ನಾಟಕ, ಮೊದಲನೆಯ ಮಹಾಯುದ್ಧ ಮುಗಿದು ಹೋಗಿತ್ತು. ಅದರ ಪರಿಣಾಮ ಪ್ರಪಂಚದಲ್ಲೆಲ್ಲಾ ಯುದ್ಧವಿರೋಧಿ ಮಾತುಗಳು ಕೇಳುತ್ತಿದ್ದಾಗ ಶ್ಮಶಾನ ಕುರುಕ್ಷೇತ್ರ ನಾಟಕ ಬಂದಿತ್ತು ಎಂದು ಶಿಕ್ಷಕ ಹೆಚ್. ಆರ್. ಭಜಂತ್ರಿ ಸ್ಮರಿಸಿದರು.

ಮೈಸೂರು ಮಠದಲ್ಲಿ ನಡೆದ 204ನೇ ವಾರದ ಸಾಹಿತ್ಯ ಚಿಂತನಾ ಗೋಷ್ಠಿಯಲ್ಲಿ ರಾಷ್ಟ್ರಕವಿ ಕುವೆಂಪುರವರ ‘ಸ್ಮಶಾನ ಕುರುಕ್ಷೇತ್ರಂ’ ನಾಟಕದ ಕುರಿತು ಉಪನ್ಯಾಸ ನೀಡಿದರು.

ಕುರುಕ್ಷೇತ್ರ ಯುದ್ಧವೇ ನಾಟಕದ ವಸ್ತುವಾದರೂ, ಅದನ್ನು ಯಾವ ಯುದ್ಧಕ್ಕಾದರೂ ಅನ್ವಯಿಸಿಕೊಳ್ಳಬಹುದಾದಂತಹ ನಾಟಕ. ಕನ್ನಡದ ರಂಗನಿರ್ದೇಶಕರೊಬ್ಬರು ಕಾರ್ಗಿಲ್ ಯುದ್ಧಕ್ಕೂ ಅದನ್ನು ಅನ್ವಯಿ ಸಿ ರಂಗಪ್ರದರ್ಶನ ನೀಡಿದ್ದನ್ನು ಗಮನಿಸಿದರೆ. ಆ ನಾಟಕದ ಸಾರ್ವಕಾಲಿಕತೆ ಮನದಟ್ಟಾಗುತ್ತದೆ.

ಈ ಸಂದರ್ಭದಲ್ಲಿ  ಕಸಾಪ ಜಿಲ್ಲಾ ಮಹಿಳಾ ಘಟಕದ ಪ್ರತಿನಿಧಿ ಮಂಜುಳಾ ರೇವಡಿ, ಮಹಾದೇವಿ ಬಡಿಗಣ್ಣವರ, ಶಂಕರ ಉರವಕೊಂಡ, ಎಂ.ಎಸ್.ಮಕಾನದಾರ, ಬಿ.ವಿ ಮುನವಳ್ಳಿ, ಕೆ.ಜಿ ಸಂಗಟಿ, ಶಂಕರ ಕಲ್ಲಿಗನೂರ, ಭಿಮಾಂಬಿಕಾ ನೂಲ್ವಿ, ಹುಚ್ಚಪ್ಪ ಹಾವೇರಿ, ಎನ್. ಎಸ್. ಸವಣೂರ, ಶ್ರೀನಿಧಿ ಮಾಳಗಿ, ಶಿವಾನಿ ಜುಜಾರೆ, ಸಾಕ್ಷಿ ಜಾಧವ್, ಕೊಟ್ರೇಶ ಚಿಲಕಾ, ಮಂಜುನಾಥ್ ಕೊಡೆಕಲ್, ವಿಜಯ ಕುಮಾರ್ ಬಡಿಗಣ್ಣವರ ಇದ್ದರು.

Related