ಆಸ್ಪತ್ರೆ ನಿರ್ಮಾಣಕ್ಕೆ 50 ಲಕ್ಷ ರೂ. ನೀಡಿದ ನಿರ್ದೇಶಕ..!

  • In Cinema
  • August 16, 2022
  • 218 Views
ಆಸ್ಪತ್ರೆ ನಿರ್ಮಾಣಕ್ಕೆ 50 ಲಕ್ಷ ರೂ. ನೀಡಿದ ನಿರ್ದೇಶಕ..!

ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ದೇಶಕ ಪ್ರಶಾಂತ್ ನೀಲ್, ಕೇವಲ ಸಿನಿಮಾಗಳಿಂದ ಮಾತ್ರ ಗಮನ ಸೆಳೆಯುತ್ತಿಲ್ಲ. ಅವರ ಸಮಾಜಮುಖಿ ಕೆಲಸಗಳು ಕೂಡ ಅವರನ್ನು ಗೌರವದಿಂದ ಕಾಣುವಂತೆ ಮಾಡುತ್ತಿವೆ. ಸಿನಿಮಾಗಳಿಂದ ಪ್ರಶಾಂತ್ ಫೇಮಸ್ ಆಗಿದ್ದರೂ, ಇದೀಗ ಅವರು ತಾವು ಹುಟ್ಟಿದ ಊರಿನಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಿನ ಆಸ್ಪತ್ರೆಗೆ ಐವತ್ತು ಲಕ್ಷ ರೂಪಾಯಿಯನ್ನು ಕೊಡುವ ಮೂಲಕ ಮತ್ತೆ ಸದ್ದು ಮಾಡಿದ್ದಾರೆ.

ಪ್ರಶಾಂತ್ ನೀಲ್ ಮೂಲತಃ ಆಂಧ್ರ ಪ್ರದೇಶದ ನೀಲಕಂಠಪುರಂ ನವರು. ಅವರ ಪೂರ್ಣ ಹೆಸರು ಪ್ರಶಾಂತ್ ನೀಲಕಂಠಪುರಂ, ಅದನ್ನೇ ಅವರು ಪ್ರಶಾಂತ್ ನೀಲ್ ಅಂತ ಬದಲಾಯಿಸಿಕೊಂಡಿದ್ದಾರೆ. ಈ ಊರಿನಲ್ಲಿ ಕಣ್ಣಿಗೆ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದ್ದು, ತಮ್ಮ ತಂದೆಯ 75ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಹೆಸರಿನಲ್ಲೇ 50 ಲಕ್ಷ ರೂಪಾಯಿಯನ್ನು ನೀಡಿದ್ದಾರೆ.

ಪ್ರಶಾಂತ್ ನೀಡಿರುವ ದೇಣಿಗೆಯನ್ನು ಬಹಿರಂಗ ಪಡಿಸಿದ್ದು, ಸ್ವತಃ ಅವರ ಚಿಕ್ಕಪ್ಪ, ಆಂಧ್ರ ಪ್ರದೇಶ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ, ಮಾಜಿ ಸಚಿವ ಡಾ. ಎನ್. ರಘುವೀರ ರೆಡ್ಡಿ ಅವರು. ಈ ವಿಷಯವನ್ನು ಟ್ವಿಟ್ ಮಾಡಿ, ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹಣದಿಂದ ಎಸ್.ವಿ. ಪ್ರಸಾದ್ ಕಣ್ಣಿನ ಆಸ್ಪತ್ರೆ ಹಲವರಿಗೆ ಬೆಳಕಾಗಲಿದೆ ಎಂದು ಅವರು ಬರೆದುಕೊಂಡಿದ್ದಾರೆ.

Related