ಕಾಂಗ್ರೆಸ್ ಪಕ್ಷದ ನಾಶ ಆರಂಭ!: ಯತ್ನಾಳ್‌

ಕಾಂಗ್ರೆಸ್ ಪಕ್ಷದ ನಾಶ ಆರಂಭ!: ಯತ್ನಾಳ್‌

ಉಡುಪಿ: ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷ ಜಾತ್ಯತೀತ ಪಕ್ಷ ಎಂದು ಪದೇಪದೇ ಸಾರಿ ಹೇಳುತ್ತಾರೆ. ಇದನ್ನು ಸಾಬೀತು ಮಾಡಬೇಕಾದರೆ ಜನವರಿ 22ರಂದು ಅಯೋಧ್ಯ ರಾಮ ಮಂದಿರ ಉದ್ಘಾಟನೆ ದಿನದಂದು ಕರ್ನಾಟಕ ರಾಜ್ಯದಲ್ಲಿ ರಜ ಘೋಷಿಸಲಿ ಆಗ ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತ್ಯತೀತ ರಾಗಿದ್ದಾರೆ ಎಂದು ಬಿಜೆಪಿಯ ಶಾಸಕ ಬಸವರಾಜ್ ಯತ್ನಾಳ್ ಪಾಟೀಲ್ ಅವರು ಹೇಳಿದ್ದಾರೆ.

ಇಂದು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಒಂದು ಕೋಮಿನ ಪರವಾಗಿದ್ದಾರೆ ಎಂಬ ಆರೋಪದಿಂದ ಹೊರಗೆ ಬರುವುದಕ್ಕೆ ಇದೊಂದು ಒಳ್ಳೆಯ ಅವಕಾಶ, ಈ ಅವಕಾಶವನ್ನು ಬಳಸಿಕೊಳ್ಳುವ ಸದ್ಬುದ್ದಿಯನ್ನು ಪ್ರಭು ಶ್ರೀರಾಮ ಅವರಿಗೆ ನೀಡಲಿ. ಎಷ್ಟೋ ಜನರಿಗೆ ರಾಮ ಬುದ್ದಿ ನೀಡಿದ್ದಾನೆ, ಸಿದ್ದರಾಮಯ್ಯರಿಗೂ ಕೊಡಬಹುದು ನೋಡೋಣ ಎಂದವರು ಹೇಳಿದರು.

ಹಿಂದೂಗಳ ಭಾವನೆಗೆ ಅಪಮಾನ‌ ಮಾಡುವುದೇ ಕಾಂಗ್ರೆಸ್ ಸರ್ಕಾರದ ಸಂಸ್ಕೃತಿಯಾಗಿದೆ. ಅವರ ಹೇಳಿಕೆ, ನಡವಳಿಕೆ ನೋಡಿದರೇ ಹಿಂದೂಗಳಿಗೆ ಅಪಮಾನ ಮಾಡಿ‌ದರೆ ಮುಸ್ಲೀಂ‌ ಮತಗಳು ಹೆಚ್ಚುತ್ತವೆ ಎನ್ನುವ ಭಾವನೆ ಇರಬಹುದು. ದೇಶದ ಪ್ರತಿಯೊಬ್ಬನ ಮನಸಲ್ಲಿ ರಾಮ ಮಂದಿರದ ಸಂಭ್ರಮ ಇದೆ, ಇಂತಹ ಗಳಿಗೆಯಲ್ಲಿ ಅಪಶಬ್ದಗಳನ್ನು ನುಡಿಯುವುದು ಟೀಕಿಸುವುದು ಅವರ ಕಾಂಗ್ರೆಸ್ ಪಕ್ಷದ ನಾಶ ಆರಂಭ ಎಂದವರು ಭವಿಷ್ಯ ನುಡಿದರು.

 

Related