ತಾಯಿಯನ್ನು ಕೊಲೆ ಮಾಡಿದ ಮಗಳು ಹಾಗೂ ಪ್ರಿಯಕನ ಬಂದನ

ತಾಯಿಯನ್ನು ಕೊಲೆ ಮಾಡಿದ ಮಗಳು ಹಾಗೂ ಪ್ರಿಯಕನ ಬಂದನ

ಬೆಂಗಳೂರು, ಫೆ. 07: ಇಡೀ ರಾಜ್ಯವನ್ನೆ ಬೆಚ್ಚಿಬೀಳಿಸಿದ್ದ ಮಗಳೆ ಹೆತ್ತ ತಾಯಿಯನ್ನು ಕೊಲೆ ಮಾಡಿದ ಪ್ರಕರಣ ಅರೋಪಿಗಳನ್ನು ಕೆ.ಆರ್.ಪುರ ಪೊಲೀಸರು ಅಂಡಮಾನ್ ನಲ್ಲಿ ಬಂದಿಸಿದ್ದು, ಬೆಂಗಳೂರಿಗೆ ಕರೆತಂದಿದ್ದಾರೆ. ಇಲ್ಲಿ ವಿಚಾರಣೆ ನಡೆಸಿದಾಗ ಪೊಲೀಸರೆ ಬೆಚ್ಚಿ ಬೀಳಿಸುವಂತಹ ಸತ್ಯ ಹೊರಬಿದ್ದಿದೆ .

ಬೆಂಗಳೂರಿನ ಕೆ.ಆರ್.ಪುರ ಪೊಲೀಸರ ಅಥಿತಿಯಾಗಿರುವ ಈ ಜೋಡಿಯ ಹೆಸರು ಅಮೃತ ಹಾಗೂ ಶ್ರೀಧರ್. ಕೆಳದ ನಾಲ್ಕು ದಿನ‌ಗಳ ಹಿಂದೆ ಇಲ್ಲಿನ ಅಕ್ಷಯ ನಗರದಲ್ಲಿ ತನ್ನ ತಾಯಿ ನಿರ್ಮಲರನ್ನು ಕೊಲೆ ಮಾಡಿ ತಮ್ಮ ಹರೀಶ್ ನ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದ ಅರೋಪಿ ಅಮೃತ ಅಕೆಯ ಪ್ರಿಯಕರ ಎನ್ನಲಾದ ಶ್ರೀಧರ್ ಜೊತೆ ಅಂಡಮಾನ್ ಗೆ ಎಸ್ಕೇಪ್ ಆಗಿದ್ರು. ಈ ಕೊಲೆ ಪ್ರಕರಣ ಬೆನ್ನತ್ತಿದ ಕೆ.ಆರ್.ಪುರ ಪೊಲೀಸರು ನಿನ್ನೆ ಅಂಡಮಾನ್ ನಿಕೊಬಾರ್ ಪೋರ್ಟ್ ಬ್ಲೇರ್ ನಲ್ಲಿ ವಶಕ್ಕೆ ಪಡೆದು  ಬೆಂಗಳೂರಿಗೆ ಕರೆತಂದಿದ್ದಾರೆ.

ಕೊಲೆಗು ಮುನ್ನ ಹೈದ್ರಾಬಾದ್ ಟ್ರೀಪ್ ಹೋಗುವುದಾಗಿ ತಿಳಿಸಿದ್ದ ಅರೋಪಿ ಅಮೃತ ಹಾಗೂ ಶ್ರೀಧರ್ ಪೊಲೀಸರ ಕಣ್ ತಪ್ಪಿಸಲು  ಹೈದ್ರಾಬಾದ್ ಜೊತೆಗೆ ಮುಂಬೈ ಹಾಗೂ ಚೆನ್ನೈ ದಾರಿಗಳನ್ನು ತೋರಿಸಿ ಅಂಡಮಾನ್ ಗೆ ಹೋಗಿದ್ದರು. ಆದರೆ ಅಲ್ಲಿ ಅವರು ಸುತ್ತಾಡಲು ಬೈಕ್ ಬುಕ್ ಮಾಡಿದ್ದ ಟವರ್ ಲೊಕೇಶನ್ ನಿಂದ ಅರೋಪಿಗಳ ಸುಳಿವು ಸಿಕ್ಕಿದ್ದು, ಅವರನ್ನು ಬಂದಿಸಿ ಕರೆತಂದಿದ್ದಾರೆ.

ಅಮೃತ ಮೊದಲೆ ಶ್ರೀಧರ್ ಜೊತೆ ಅಂಡಮಾನ್ ಟ್ರಿಪ್ ಪ್ಲಾನ್ ಮಾಡಿಕೊಂಡಿದ್ದು, ಮನೆಯಲ್ಲಿ ಹೈದ್ರಾಬಾದ್ ಗೆ ಹೊರಡುವ ನಾಟಕವಾಡಿದ್ಲು, ಅದಕ್ಕೆ ಅಡ್ಡಿ ಪಡಿಸಿದ ತಾಯಿಯನ್ನು ಕೊಲೆ ಮಾಡಿ, ತಮ್ಮನಿಗೆ ಚಾಕು ಇರಿದು ಎಸ್ಕೇಪ್ ಆದ ಅಮೃತ ಶ್ರೀಧರ್ ನಿಗೆ ತಾಯಿಯ ಕೊಲೆ ವಿಷಯ ತಿಳಿಸಿದ್ದು ಮಾತ್ರ ಅಂಡಮಾನ್ ನಲ್ಲಿ.

ಈ ಕೊಲೆಯ ಹಿಂದಿನ ಮತ್ತೊಂದು ಇಂಟ್ರಸ್ಟಿಂಗ್ ವಿಷಯ ಏನಪ್ಪ ಅಂದ್ರೆ 2017 ರಲ್ಲಿ ಹೊಸಕೋಟೆ ಬಳಿ ನಡೆದಿದ್ದ ಅಪಘಾತ. ಅಂದು ಇವರು ಕೋಲಾರ ರಸ್ತೆಯಲ್ಲಿ ಬರುವಾಗ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಮೂವರ ಸಾವಿಗೆ ಕಾರಣರಾಗಿದ್ದರು. ಆ ಪ್ರಕರಣದಿಂದ ಬಚಾವಾಗಲು  15 ಲಕ್ಷ ಸಾಲ ಮಾಡಿ, ಮನೆಯಲ್ಲಿ ಹಣ ಒಡವೆ ದೊಚಿಕೊಂಡು ಹೋಗುವಾಗ ತಾಯಿ ಅಡ್ಡಬಂದಿದ್ದರಿಂದ ಅಮೃತ ತನ್ನ ತಾಯಿಯನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಇನ್ನು ಅಮೃತ ತಾನು ಕೆಲಸ ಮಾಡುವ ಕಚೇರಿಯಲ್ಲಿ ಮತ್ತೊಬ್ಬನನ್ನು ಪ್ರೀತಿಸುತ್ತಿದ್ದು, ಈಕೆಯ ಪ್ರೀಯಕರನೆನಿಸಿಕೊಂಡಿದ್ದ ಶ್ರೀಧರ್ ಅರೋಪಿ ಎಸ್ಕೇಪ್ ಆಗಲು ಸಹಕರಿಸಿದ್ದರಿಂದ ಅಮೃತಾಳ ಜೊತೆ ಆತನು ಜೈಲು ಸೇರುವಂತಾಗಿದೆ.

Related