ವಿನಾಕಾರಣ ಹೊರೆಗೆ ಬಂದರೆ ಕಠಿಣಕ್ರಮ ತಹಶೀಲ್ದಾರ ಭಸ್ಮೆ

ವಿನಾಕಾರಣ ಹೊರೆಗೆ ಬಂದರೆ ಕಠಿಣಕ್ರಮ ತಹಶೀಲ್ದಾರ ಭಸ್ಮೆ

ಮೂಡಲಗಿ : ಜಿಲ್ಲಾದ್ಯಾಂತ ಮೂರು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಘೋಷಣೆ ಹಿನ್ನೆಲೆ ಭದ್ರತಾ ಬಗ್ಗೆ ಸಾರ್ವಜನಿಕರಿಗೆ ಮನೆ ಬಿಟ್ಟು ಹೊರಗೆ ಬರದಂತೆ ಪಥಸಂಚಲನ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ ಎಂದು ತಹಶೀಲ್ದಾರ ಡಾ. ಮೋಹನಕುಮಾರ ಭಸ್ಮೆ ಹೇಳಿದರು.

ಈ ವೇಳೆ ಮಾತನಾಡಿದ ಅವರು, ಬುಧುವಾರದಂದು ತಹಶೀಲ್ದಾರ್ ಕಚೇರಿ ಹಾಗೂ ಪೊಲೀಸ್ ಇಲಾಖೆಯ ಸಯೋಗದಲ್ಲಿ ಜರುಗಿದ ಸ್ಥಳೀಯ ಪೊಲೀಸ್ ಠಾಣೆಯ ಆವರಣದಲ್ಲಿ ಚಾಲನೆ ನೀಡಿ. ವಿನಾಕಾರಣ ಸಾರ್ವಜನಿಕರು ಓಡಾಡಿದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಆದರಿಂದ ತಮ್ಮ ಜೀವ ರಕ್ಷಿಸಲು ಇಡೀ ತಾಲೂಕಾಡಳಿತವೇ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೊರೋನಾ ತಡೆಗಟ್ಟಲು ಹೋರಾಡುತ್ತಿರುವ ಅಧಿಕಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಹೇಳಿದರು.
ಬಳಿಕ ಪಿಎಸ್‌ಐ ಎಚ್,ವೈ. ಬಾಲದಂಡಿ ಮಾತನಾಡಿ, ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಪ್ರಥಸಂಚಲನ ಮಾಡಿ ಸಂಪೂರ್ಣ ಲಾಕ್‌ಡೌನ್ ಬಗ್ಗೆ ಜಾಗೃತಿ ಮೂಡಿಸಲಾಗುವುದು ಹಾಗೂ ಸಾರ್ವಜನಿಕರು ಇಷ್ಟು ದಿನ ನಮ್ಮ ಇಲಾಖೆಯ ಜೊತೆ ಸಹಕಾರ ನೀಡುತ್ತಾ ಬಂದಿದ್ದಾರೆ. ಸಾರ್ವಜನಿಕರು ಹೊರಗೆ ಬರದೆ ಸಹಕಾರ ನೀಡಿ ತಮ್ಮ ಜೀವವನ್ನು ರಕ್ಷಿಸಿಕೊಳ್ಳಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಪಿಐ ವೆಂಕಟೇಶ ಮುರನಾಳ, ಕರ್ನಾಟಕ ರಾಜ್ಯ ಶಶಸ್ತç ಪೊಲೀಸ್ ಮೀಸಲು ಪಡೆ, ಸ್ಥಳೀಯ ಸಿಬ್ಬಂದಿಗಳು ಇದ್ದರು.

Related