ಹೋಮ್ ವರ್ಕ್ ತೋರಿಸಲು 35 ಕಿ.ಮೀ ನಡೆದ ಬಾಲಕ

ಹೋಮ್ ವರ್ಕ್ ತೋರಿಸಲು 35 ಕಿ.ಮೀ ನಡೆದ ಬಾಲಕ

ಧಾರವಾಡ : ಕೊರೋನಾ ಭೀತಿಯಿಂದ ಶಾಲೆಗಳು ಬಂದ್ ಆಗಿದ್ದು, ಆನ್‌ಲೈನ್ ಕ್ಲಾಸ್‌ಗಳು ಆರಂಭವಾಗಿವೆ. ನಗರ ಪ್ರದೇಶಗಳಲ್ಲಿ ಆನ್‌ಕ್ಲಾಸ್‌ಗಳು ಸರಾಗವಾಗಿ ಸಾಗುತ್ತಿವೆ.

ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹಲವೆಡೆ ಇಂಟರ್‌ನೆಟ್ ಸೌಲಭ್ಯಗಳಿಲ್ಲದೇ ಅನೇಕ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇಲ್ಲೊಬ್ಬ 2ನೇ ತರಗತಿ ವಿದ್ಯಾರ್ಥಿ ಟೀಚರ್‌ಗೆ ಹೋಮ್ ವರ್ಕ್ ತೋರಿಸಲೆಂದು ಬರೋಬ್ಬರಿ 35 ಕಿ.ಮೀ ಪ್ರಯಾಣಿಸಿದ್ದಾನೆ.

8 ವರ್ಷದ ಬಾಲಕ ಪವನ್ ಕಂಠಿ ಹೋಮ್ ವರ್ಕ್ ತೋರಿಸಿ, ಪಠ್ಯ ಪುಸ್ತಕಗಳನ್ನು ಪಡೆದುಕೊಂಡು ಹೋಗಲೆಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿಬೂದಿಹಾಳದಿಂದ ಹುಬ್ಬಳ್ಳಿಗೆ ಬಂದಿದ್ದಾನೆ.

ಬಾಲಕ ಪವನ್ ತಂದೆ-ತಾಯಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. 2ನೇ ತರಗತಿ ಓದುತ್ತಿರುವ ಪವನ್‌ಗೆ ಆನ್ ಲೈನ್ ಕ್ಲಾಸ್ ಸೌಲಭ್ಯವಿಲ್ಲ. ಹೀಗಾಗಿ ಹುಬ್ಬಳ್ಳಿಯಲ್ಲಿರುವ ತನ್ನ ಶಿಕ್ಷಕಿ ಅನಸೂಯಾ ಅವರಿಗೆ ಹೋಂ ವರ್ಕ್ ತೋರಿಸಲು 35 ಕಿ.ಮೀ. ಪ್ರಯಾಣಿಸಿ ಬಂದಿದ್ದಾನೆ.

Related