ಬಾಲಕ ನಾಪತ್ತೆ

ಬಾಲಕ ನಾಪತ್ತೆ

ಬೆಳ್ಳಾರೆ, ಫೆ. 11 : ಮನೆಯ ಶೌಚಾಲಯಕ್ಕೆ ತೆರಳಿದ ಬಾಲಕ ನಾಪತ್ತೆಯಾದ ಘಟನೆ ಪೆರುವಾಜೆ ಗ್ರಾಮದ ಕುಂಡಡ್ಕದಲ್ಲಿ ಮಂಗಳವಾರ ನಡೆದಿದೆ.
ಬೆಳ್ಳಾರೆ ಸನಿಹದ ಪೆರುವಾಜೆ ಗ್ರಾಮದ ಕುಂಡಡ್ಕ ನಿವಾಸಿ ಕುಂಞ ಅವರ ಪುತ್ರ, ಚೆನ್ನಾವರ ಕಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ( 11) ನಾಪತ್ತೆಯಾದ ಬಾಲಕ. ಬೆಳಗ್ಗೆ 7 ಗಂಟೆ ಹೊತ್ತಿಗೆ ತಾಯಿಯ ಬಳಿ ಶೌಚಾಲಯಕ್ಕೆ ತೆರಳುವುದಾಗಿ ಹೇಳಿ ಹೋಗಿದ್ದ. ತುಂಬಾ ಹೊತ್ತಾದರೂ ಬಾರದಿರುವ ಕಾರಣ ಮನೆ ಮಂದಿ ಹುಡಕಾಟ ನಡೆಸಿದ್ದಾರೆ.

Related