ಕಾಂಗ್ರೆಸ್ ಶಾಸಕರ ಗುದ್ದಾಟ

  • In State
  • August 24, 2021
  • 490 Views

ವಿಜಯಪುರ : ನೀರಾವರಿ ವಿಚಾರವಾಗಿ ಸ್ವಪಕ್ಷೀಯ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾಂಗ್ರೆಸ್‌ನ ಎಂ ಬಿ ಪಾಟೀಲ್ ಮಂಗಳವಾರ ತಿರುಗೇಟು ನೀಡಿದ್ದಾರೆ.
“ನೀರಾವರಿ ವಿಚಾರದಲ್ಲಿ ನನಗೆ ಸಿದ್ದೇಶ್ವರ ಶ್ರೀಗಳೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನನಗೆ ಇನ್ಯಾರ ಸರ್ಟಿಫಿಕೇಟ್ ಬೇಕಾಗಿಲ್ಲ. ಇಂಡಿ ಕೆರೆ ತುಂಬುವ ಯೋಜನೆ ಆಗಲು ನಾನೇ ಕಾರಣ. ಹೊಟ್ಟೆಕಿಚ್ಚಿನಿಂದ ಅಜೀರ್ಣಗೊಂಡು ಮಾತನಾಡಿದರೆ” ಎಂದು ಎಂ ಬಿ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ.

ಲಿಂಗಾಯತ ಹೋರಾಟದಿಂದ ಕೈ ಪಕ್ಷಕ್ಕೆ ಹಿನ್ನೆಡೆಯಾಗಿದೆ ಎಂದು ಇಂಡಿ ಶಾಸಕರ ಆರೋಪ ವಿಚಾರ. ಸ್ವತಂತ್ರ ಲಿಂಗಾಯತ ಧರ್ಮದಿಂದ ಯಾವುದೇ ಹಿನ್ನಡೆಯಾಗಿಲ್ಲ ಉತ್ತರಕುಮಾರ ಏನೂ ಅರಿಯದೇ ಮಾತನಾಡುತ್ತಿದ್ದಾನೆ. ಈಗ 2ಎ ಹೋರಾಟದಿಂದ ಒಳಪಂಗಡ ಒಡೆದಿವೆ. ಈಗ ಜನರಿಗೆ ಲಿಂಗಾಯತ ಸ್ವತಂತ್ರ ಧರ್ಮ ಆಗಿದ್ದರೇ ಲಾಭವಾಗುತ್ತಿತ್ತು ಅನ್ನೋದು ಅರ್ಥವಾಗುತ್ತಿದೆ ಎಂದು ಎಂ.ಬಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಎಲ್‌ಡಿ ರಹಸ್ಯ ಬಯಲು ಮಾಡುವೆ ಎಂದು ಯಶವಂತರಾಯಗೌಡ ಪಾಟೀಲ್ ಹೇಳಿದ್ದಾರೆ. 1980ರಲ್ಲಿ ಇಂಜಿನಿಯರಿಂಗ್ ಕಾಲೇಜ್ ಕಟ್ಟುವಾಗ ಹಣ ಇಲ್ಲದೆ ನನ್ನ ತಂದೆಯೇ ಸ್ವತಃ ಗ್ಯಾರಂಟಿ ನೀಡಿ 2 ಕೋಟಿ ರೂ., 1986 ರಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ವೇಳೆ 5ಕೋಟಿ ರೂ ಸಾಲ ತಂದಿದ್ದಾರೆ. ಬಿಎಲ್ಡಿ ಜೊತೆಗೆ ನಮ್ಮ ಇತಿಹಾಸ ಇದು. ನಾನು ಕೂಡ ಇಂಡಿಯಾ ಭೀಮಾಶಂಕರ ಕಾರ್ಖಾನೆ ಬಗ್ಗೆ ಮಾತನಾಡಬಹುದು, ಭೀಮಾನದಿ ಮರಳಿನ ಬಗ್ಗೆ ಮಾತನಾಡಬಹುದು, ಬಂಥನಾಳ ಸ್ವಾಮೀಜಿಗಳ ಪುಣೆಯ ಆಸ್ತಿಯನ್ನ ಯಾರು ಗುಳುಂ ಮಾಡಿದರು ತಿಳಿದುಕೊಳ್ಳಬೇಕಾಗುತ್ತದೆ ಎಂದು ಇಂಡಿ ಶಾಸಕ ಈ ಮೂಲಕ ಎಂ ಬಿ ಪಾಟೀಲ್ ಎಚ್ಚರಿಕೆ ನೀಡಿದರು.

Related