ನದಿ ತೀರದ ಗ್ರಾಮಸ್ಥರ ಸಮಸ್ಯೆ ಆಲಿಸಿದ ಬಿಜೆಪಿ

ನದಿ ತೀರದ ಗ್ರಾಮಸ್ಥರ ಸಮಸ್ಯೆ ಆಲಿಸಿದ ಬಿಜೆಪಿ

ಕಾಗವಾಡ : ಮಹಾರಾಷ್ಟ್ರದ ಕೊಂಕಣ ಘಟ್ಟದಲ್ಲಿ ಸುರಿಯುತ್ತಿರುವ ಮಳೆ ಮತ್ತು ಅಣೆಕಟ್ಟೆಗಳಿಂದ ಹರಿದು ಬಿಟ್ಟಿರುವ ನೀರಿನ ಪ್ರಮಾಣ ಕೃಷ್ಣಾ ನದಿಗೆ ಮಹಾಪೂರ ಬಂದಿದೆ. ಇದರಿಂದ ನದಿ ತೀರದ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆಗಳನ್ನು ಕೆಂಪವಾಡ ಸಕ್ಕರೆ ಕಾರ್ಖಾನೆಯ ಎಂ.ಡಿ, ಬಿಜೆಪಿ ಪಕ್ಷದ ಮುಖಂಡರಾದ ಶ್ರೀನಿವಾಸ ಶ್ರೀಮಂತ ಪಾಟೀಲ ಭೇಟಿನೀಡಿ, ಆಲಿಸಿದರು.

ಮಂಗಳವಾರ ಸಂಜೆ ಕೃಷ್ಣಾ ನದಿ ತೀರದ ಕುಸನಾಳ-ಮೊಳವಾಡ, ಜುಗೂಳ, ಮಂಗಾವತಿ, ಶಹಾಪುರ ಗ್ರಾಮಗಳಿಗೆ ಭೇಟಿನೀಡಿ ಕಾರ್ಯಕರ್ತರೊಂದಿಗೆ ಚರ್ಚಿಸಿ ಸಮಸ್ಯೆಗಳು ಆಲಿಸಿದರು.

ಇಲ್ಲಿಯ ಜನರಿಗೆ ಧೈರ್ಯ ತುಂಬಿ ಕೊಂಕಣ ಘಟ್ಟದಲ್ಲಿ ಸುರಿಯುತ್ತಿರುವ ಮಳೆ ಮತ್ತು ಹರಿದು ಬಿಟ್ಟಿರುವ ನೀರಿನ ಕ್ಷಣ-ಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿದ್ದು, ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳುತ್ತಿದ್ದೇವೆ. ತಾಲೂಕು ತಹಶೀಲ್ದಾರ, ಪೊಲೀಸ್ ಇಲಾಖೆ ಇವರೊಂದಿಗೆ ಸಂಪರ್ಕಿಸಿ ಅವಶ್ಯಕತೆಯಿರುವ ದೋಣಿಗಳ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ವಿನಂತಿಸಿದ್ದೇನೆ ಎಂದರು.

Related