ಚೊಚ್ಚಲ ಹೆರಿಗೆಯಲ್ಲೇ ನಾಲ್ಕು ಮಕ್ಕಳ ಜನ್ಮದಾತೆ

ಚೊಚ್ಚಲ ಹೆರಿಗೆಯಲ್ಲೇ ನಾಲ್ಕು ಮಕ್ಕಳ ಜನ್ಮದಾತೆ

ಮೊದಲ ಹೆರಿಗೆಯಲ್ಲೇ ನಾಲ್ಕು ಗಂಡು ಮಕ್ಕಳಿಗೆ ಜನ್ಮ ಮಹಿಳೆಯೊಬ್ಬಳು ನೀಡಿದ್ದಾರೆ. ವಂಶೋದ್ಧಾರಕರನ್ನು ಪಲಕ್ಕಾಡ್‌ನ ಛಲಾವರ ಮೂಲದ ದಂಪತಿ ಮುಸ್ತಾಫ ಮತ್ತು ಮುಬೀನಾ ಸಂತಸದಿಂದಲೇ ಬರಮಾಡಿಕೊಂಡಿದ್ದಾರೆ.

ಮುಸ್ತಾಫ ದಂಪತಿ ಕಳೆದ ವರ್ಷ ಮದುವೆಯಾಗಿದ್ದಾರೆ. ಗರ್ಭಾವಸ್ಥೆಯ ಆರಂಭದಲ್ಲೇ ಮಬೀನಾ ನಾಲ್ಕು ಮಕ್ಕಳ ತಾಯಿ ಆಗಲಿದ್ದಾರೆ ಎಂದು ವೈದ್ಯರು ಹೇಳಿದ್ದರು.

ಪೆರಿಂಥಲ್‌ಮನ್ನದ ಮೌಲಾನಾ ಆಸ್ಪತ್ರೆಯ ಸ್ತ್ರೀರೋಗತಜ್ಞರಾದ ಡಾ. ಅಬ್ದುಲ್ ವಾಹಾಬ್ ಅವರ ಬಳಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು.

ಪ್ರತಿ ಮಗು 1100 ರಿಂದ 1600 ಗ್ರಾಂ ತೂಗುತ್ತಿದ್ದೆ. ಸದ್ಯ ಮಕ್ಕಳಿಗೆ ನಿಯೋ ಬ್ಲೆಸ್ ವಿಭಾಗದಲ್ಲಿ ವಿಶೇಷ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಎಲ್ಲ ಮಕ್ಕಳು ಸಹ ಆರೋಗ್ಯವಾಗಿದ್ದಾರೆಂದು ನಿಯೋ ಬ್ಲೆಸ್ ವಿಭಾಗದ ಉಸ್ತುವಾರಿ ಡಾ. ಜಯಚಂದ್ರ ತಿಳಿಸಿದರು.

Related