ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಟ ರಾಕ್ಷಸ

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಟ ರಾಕ್ಷಸ

ಬೆಂಗಳೂರು: ಡಾಲಿ ಧನಂಜಯ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಇದೇ ಫೆಬ್ರವರಿ 14ರಂದು ನಟ ರಾಕ್ಷಸನ ಡಾಲಿ ಧನಂಜಯ್ ನಿರ್ಮಾಣದ ಮತ್ತೊಂದು ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ನಟ ಡಾಲಿ ಧನಂಜಯ್ ತಮ್ಮದೇ ಆದ ನಟನೆಯ ಶೈಲಿ ಮತ್ತು ನಿರ್ಮಾಪಕನ ಶೈಲಿಯಲ್ಲಿ ಬಹಳ ಅಭಿಮಾನಗಳ ಬಳಗವನ್ನು ಹೊಂದಿದ್ದಾರೆ.

ಹೌದು, ಟಗರು ಪಲ್ಯ ಚಿತ್ರ ಸಕ್ಸಸ್ ನಂತರ ಮತ್ತೊಂದು ಚಿತ್ರ ನಿರ್ಮಾಣ ಮಾಡಲು ಡಾಲಿ ಧನಂಜಯ್ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಧನಂಜಯ ನಿರ್ಮಾಣದ 5ನೇ ಚಿತ್ರ ಇದಾಗಿದ್ದು, ಇದೇ ಫೆಬ್ರವರಿ 14ರಂದು ಈ ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ. ಇನ್ನು ಈ ಚಿತ್ರದಲ್ಲಿ ಯಾರೆಲ್ಲಾ ನಟನೆ ಮಾಡಿದ್ದಾರೆ ಇನ್ನಿತರ ಮಾಹಿತಿಯನ್ನು ಫೆ. 14ರಂದು ಹಂಚಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಡಾಲಿ ಪಿಚ್ಚರ್ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ.

ತಮ್ಮ ಪ್ರೊಡಕ್ಷನ್ ಮೂಲಕ ಅನೇಕ   ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಡಾಲಿ ಧನಂಜಯ್ ಈ ಭಾರಿಯೂ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಧನಂಜಯ ಅವರ ಪ್ರೊಡಕ್ಷನ್ ನಿಂದ ಯಾವ ಹೀರೋ, ನಿರ್ದೇಶಕ ಮತ್ತು ನಾಯಕಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲ ಶುರುವಾಗಿದೆ.

 

 

Related