ಮದುವೆ ಬ್ರೋಕರ್ನನ್ನು ಕೊಂದು ಎಸ್ಕೇಪ್..!

  • In Crime
  • July 27, 2022
  • 265 Views
ಮದುವೆ ಬ್ರೋಕರ್ನನ್ನು ಕೊಂದು ಎಸ್ಕೇಪ್..!

ಕೇರಳ,ಜು 27 : ಮದುವೆ ಬ್ರೋಕರ್ ಒಬ್ಬರನ್ನು ಅವರ ಮನೆಮುಂದೆಯೇ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕುಲುಕಲ್ಲೂರು ಪಂಚಾಯತ್ನಲ್ಲಿ 50 ವರ್ಷದ ವ್ಯಕ್ತಿಯನ್ನು ಕಡಿದು ಕೊಲೆ ಮಾಡಲಾಗಿದೆ. ಮೃತರನ್ನು ವಂಡುಂತಾರದ ಅಬ್ಬಾಸ್ ಎಂದು ಗುರುತಿಸಲಾಗಿದೆ.

ಮದುವೆ ದಲ್ಲಾಳಿಯಾಗಿದ್ದ ಅಬ್ಬಾಸ್ ಅವರನ್ನು ಮದುವೆ ಒಪ್ಪಂದ ಹೆಸರಿನಲ್ಲಿ ಹಣ ವಂಚಿಸಿದ ಆರೋಪದ ಮೇಲೆ ಕೊಲೆ ಮಾಡಲಾಗಿದೆ. ಬೆಳ್ಳಂಬೆಳಗ್ಗೆ ಅವರ ಮನೆಗೆ ಗ್ಯಾಂಗ್ ಬಂದಿತ್ತು. ಅಲ್ಲಿಯೇ ಹತ್ಯೆಯೂ ನಡೆದಿದೆ. ದಾಳಿಕೋರರು ಬಾಗಿಲು ಬಡಿದು, ಅಬ್ಬಾಸ್ ಮನೆಯಿಂದ ಹೊರಬಂದ ನಂತರ, ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಕೂಡಲೇ ಅಬ್ಬಾಸ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ.

ದಾಳಿಕೋರರಾದ ​​ಮುಹಮ್ಮದ್ ಅಲಿ (40) ಮತ್ತು ಎಸ್ಐ ಎಂಪಿ ರಾಜೇಶ್ ಅವರನ್ನು ಕೊಪ್ಪಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧನ ಇನ್ನೂ ದಾಖಲಾಗಿಲ್ಲ.

Related