ದೇವಾಲಯ ಆಸ್ಪತ್ರೆಯ ರೀತಿ ಬದಲಾವಣೆ!?

  • In State
  • February 9, 2024
  • 122 Views
ದೇವಾಲಯ ಆಸ್ಪತ್ರೆಯ ರೀತಿ ಬದಲಾವಣೆ!?

ಕೊಪ್ಪಳ: ಕಳೆದ ಸುಮಾರು ಒಂದು ತಿಂಗಳಿಂದ ಈ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಜ್ವರ ಬಂದಿರುವುದರಿಂದ ಇದು ಸಾಂಕ್ರಾಮಿಕ ಜ್ವರ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಸಂಕ್ರಾಮಿಕ ಜ್ವರದಿಂದ ಬಳಲುತ್ತಿರುವ ರೋಗಿಗಳನ್ನು ಗ್ರಾಮದ ಭೀಮಾಂಬಿಕ ದೇವಸ್ಥಾನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಹೌದು, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನೆರಬೆಂಚಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದಲೂ ಗ್ರಾಮದಲ್ಲಿ ವಿಪರೀತ ಜ್ವರ ಕಾಣುತ್ತಿರುವುದರಿಂದ ಗ್ರಾಮದ ಜನರೆಲ್ಲ ಜ್ವರದಿಂದ ಬಳಲುತ್ತಿದ್ದಾರೆ.

ಇನ್ನು ವೈರಲ್ ಜ್ವರವು ಗ್ರಾಮವನ್ನು ಆವರಿಸಿದ ನಂತರ ನೂರಕ್ಕೂ ಹೆಚ್ಚು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಒಂದು ತಿಂಗಳ ಹಿಂದೆ ಜ್ವರದ ಪ್ರಕರಣಗಳು ಪ್ರಾರಂಭವಾದಾಗ ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಕಳೆದ ಎರಡು ದಿನಗಳಲ್ಲಿ ಇದ್ದಕ್ಕಿದ್ದಂತೆ ಪ್ರಕರಣಗಳ ಸಂಖ್ಯೆ 100 ದಾಟಿದೆ, ಸ್ಥಳೀಯ ಆರೋಗ್ಯ ಅಧಿಕಾರಿಗಳು ಕೆಲವು ಗ್ರಾಮಸ್ಥರನ್ನು ಭೀಮಾಂಬಿಕಾ ದೇವಸ್ಥಾನಕ್ಕೆ ಸ್ಥಳಾಂತರಿಸಿದರು.

ಭೀಮಾಂಬಿಕಾ ದೇವಾಲಯ ಈಗ ಆಸ್ಪತ್ರೆಯ ರೀತಿ ಬದಲಾಗಿದೆ, ಕೆಲವರಿಗೆ IV ಹಾಕಲಾಗಿದೆ. ಇದು ವೈರಲ್ ಜ್ವರ ಎಂದು ಆರೋಗ್ಯ ಸಿಬ್ಬಂದಿ ಹೇಳುತ್ತಿದ್ದಂತೆ ರೋಗಿಗಳ ಕುಟುಂಬಸ್ಥರು ರೋಗಿಗಳಿಂದ ಅಂತರ ಕಾಪಾಡಿಕೊಂಡಿದ್ದಾರೆ.

ನೆರೆಬೆಂಚಿ ಗ್ರಾಮದಲ್ಲಿ ಒಟ್ಟು 1,200 ಜನಸಂಖ್ಯೆ ಇದ್ದು, ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲ. ಸುತ್ತಮುತ್ತಲಿನ ನೀರು, ಸ್ವಚ್ಛತೆ ಇಲ್ಲದೇ ಸೊಳ್ಳೆಗಳ ಕಾಟ ಹೆಚ್ಚಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

 

Related