ಶಿಕ್ಷಕನ ಪರಿಸರ ಪ್ರೇಮ

ಶಿಕ್ಷಕನ ಪರಿಸರ ಪ್ರೇಮ

ಮದ್ದೂರು: ಕೊರೋನಾ ಸಂದರ್ಭದಲ್ಲಿ ಆಮ್ಲಜನಕ ಹೆಚ್ಚಳಕ್ಕಾಗಿ ಗಿಡಗಳನ್ನು ವಿತರಿಸಿ ಜಾಗೃತಿ ಮೂಡಿಸಿದ ಪರಿಸರ ಪ್ರೇಮಿ.
ತಾಲೂಕಿನ ಎನ್ ಕೋಡಿಹಳ್ಳಿ ಗ್ರಾಮದ ಶಿಕ್ಷಕ ಹಾಗೂ ಪರಿಸರ ಪ್ರೇಮಿ ಕೆ. ಟಿ.ಶಿವಕುಮಾರ್ ಅವರು, ತಮ್ಮ ತಾಯಿಯ ಉತ್ತರ ಕ್ರಿಯಾದಿ ಭೂ ಶಾಂತಿ ಕಾರ್ಯಕ್ರಮದಲ್ಲಿ ಉಚಿತವಾಗಿ ಗಿಡಗಳನ್ನು ವಿತರಿಸಿ, ಜಾಗೃತಿ ಮೂಡಿಸುವ ಮೂಲಕ ವಿನೂತನವಾಗಿ, ಅರ್ಥಪೂರ್ಣವಾಗಿ ಆಚರಿಸಿದರು.
ಕೆಟಿ ಶಿವಕುಮಾರ್ ಅವರು ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಒಬ್ಬ ಅಪ್ಪಟ ಪರಿಸರಪ್ರೇಮಿಯಾಗಿದ್ದಾರೆ. ಜೊತೆಗೆ ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್ ಸ್ಥಾಪಿಸಿ, ಸಮಾಜಮುಖಿ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಗೀತ ಗಾಯನ ನಡೆಸಿಕೊಟ್ಟು, ಮಾತನಾಡಿದ ಕಲಾವಿದ ಹುರುಗಲವಾಡಿ ರಾಮಯ್ಯನವರು ಮಾತನಾಡಿ ಕೊರೋನ ಜಗತ್ತನ್ನು ಹೆಮ್ಮಾರಿಯಾಗಿ ಕಾಡಿದೆ. ಎರಡನೇ ಅಲೆಯ ಅಬ್ಬರದಲ್ಲಿ ಅನೇಕರನ್ನು ಬಲಿ ತೆಗೆದುಕೊಳ್ಳುತ್ತಿದೆ. ಇದಕ್ಕೆ ಪರಿಸರದ ಅಸಮತೋಲನ ಹಾಗೂ ಆಮ್ಲಜನಕದ ಕೊರತೆಯೆ ಕಾರಣ. ಈ ಸಂದರ್ಭದಲ್ಲಿ ಉತ್ತಮ ಆಮ್ಲಜನಕದಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾಗಿದೆ. ಶಿವಕುಮಾರ್ ಅವರು ಉಚಿತವಾಗಿ ಗಿಡಗಳನ್ನು ವಿತರಿಸಿ, ಕೊರೋನೊ ಹಾಗೂ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ ತಮ್ಮ ತಾಯಿಯ ಆತ್ಮಕ್ಕೆ ಶಾಂತಿ ಕೋರಿದ್ದಾರೆ ಎಂದು ಅವರನ್ನು ಶ್ಲಾಘಿಸಿದರು.

Related