ಶಿಕ್ಷಕ ಅಮಾನತು

ಶಿಕ್ಷಕ ಅಮಾನತು

ಮೈಸೂರು, ಫೆ. 29 : ವಿದ್ಯಾರ್ಥಿಗಳಿಗೆ ಹುಳು ಮಿಶ್ರಿತ ಬಿಸಿಯೂಟ ನೀಡುವ ಮೂಲಕ ನಿರ್ಲಕ್ಷ್ಯ ತೋರಿದ್ದ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಜಿಲ್ಲೆಯ ಹೆಚ್.ಡಿ ಕೋಟೆ ಪಟ್ಟಣದ ಆದರ್ಶ ಶಾಲೆಯ ಚಂದ್ರಶೇಖರ್ ಅಮಾನತುಗೊಂಡ ಮುಖ್ಯ ಶಿಕ್ಷಕ. ಹುಳು ಮಿಶ್ರಿತ ಬಿಸಿಯೂಟ ನೀಡಿದ್ದರಿಂದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ನಂತರ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಎರಡು ತಿಂಗಳ ಹಿಂದೆ ಈ ಘಟನೆ ಸಂಭವಿಸಿತ್ತು. ಇದಕ್ಕೆ ಮುಖ್ಯ ಶಿಕ್ಷಕನ ನಿರ್ಲಕ್ಷ್ಯವೇ ಕಾರಣ ಎಂದು ತನಿಖೆ ವೇಳೆ ತಿಳಿದು ಬಂದಿದ್ದು, ಘಟನೆ ಬಳಿಕ ಶಾಲೆಗೆ ಭೇಟಿ ನೀಡಿ ತನಿಖೆ ನಡೆಸಿದ್ದ ಜಿಲ್ಲಾಧಿಕಾರಿಗಳ ತಂಡ, ಹುಳು ಮಿಶ್ರಿತ ಬಿಸಿಯೂಟ ಬಡಿಸಿರುವುದು ಸಾಬೀತಾಗಿತ್ತು. ಹೀಗಾಗಿ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಜಾರಿ ಮಾಡಿದ್ದಾರೆ.

Related