ಸಮುದಾಯ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸಮುದಾಯ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಗಜೇಂದ್ರಗಡ : ನಗರದ ಅಂಜುಮನ್-ಎ-ಇಸ್ಲಾಂ ಕಮೀಟಿ ವತಿಯಿಂದ ಮಹ್ಮದ ಪೈಗಂಬರ್ ಅವರ ಜಯಂತಿ ಈದ್ ಮಿಲಾದ-ಉನ್ನಬಿ ಯ ಅಂಗವಾಗಿ ನಗರದಲ್ಲಿನ ಶಾದಿ ಮಹಲ್ ನಲ್ಲಿ ಇಸ್ಲಾಂ ಸಮುದಾಯದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಖುರಾನ್ ಹದಿಯಾ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ಅಂಜುಮನ್ ಎ ಇಸ್ಲಾಂ ಕಮೀಟಿಯ ಚೇರಮನ್ ಎ.ಡಿ. ಕೋಲಕಾರ ಇಸ್ಲಾಂ ಸಮುದಾಯದ 80% ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಮಾಡಿ ಮಾತನಾಡಿದರು.

ಪೈಗಂಬರ್ ಮಹಿಳಾ ಶಿಕ್ಷಣ, ಅವರಿಗೆ ಸಲ್ಲಬೇಕಾದ ಗೌರವದ ಬಗ್ಗೆ ಮೊದಲ ಬಾರಿಗೆ ಧ್ವನಿಯನ್ನು ಎತ್ತಿದಂತಹ ಮೊದಲ ಮಹಾನ ದಾರ್ಶನಿಕರಾಗಿದ್ದಾರೆ. ಅದರಂತೆ ತಮ್ಮ ಸ್ವಂತ ಮಗಳಾದ ಫಾತಿಮಾಳ ಮಾದರಿಯಾಗಿ ಬೆಳೆಸಿದರು.

ಅಲ್ಲದೆ ಅನಾಥ ಮಕ್ಕಳ ಎದುರು ಸ್ವಂತ ಮಕ್ಕಳನ್ನು ಲಾಲಿಸಬಾರದು, ಸ್ತ್ರೀಯರಿಗೆ ಗೌರವ ನೀಡಬೇಕು, ಸ್ವತಃ ತಾವೇ ವಿಧವೆ ಮದುವೆ ಯಾಗುವುದರ ಮೂಲಕ ಇಡೀ ಜಗತ್ತಿಗೆ ಆದರ್ಶರಾದರು, ಮಾದಕ ವಸ್ತುಗಳ ಸೇವನೆ ನಿಷೇಧಿಸಿದರು, ಎಲ್ಲ ವರ್ಣದ ಜನರನ್ನು ಸಮಾನವಾಗಿ ಕಾಣಬೇಕು ಎಂದು ಸಮಾನತೆ ಜಗತ್ತಿಗೆ ಸಾರಿದ ಮಹಾನ್ ಪುರುಷ ಪ್ರವಾದಿ ಮಹಮ್ಮದರಾಗಿದ್ದಾರೆ ಎಂದರು.

Related