ಮತ್ತೊಮ್ಮೆ ಪ್ರಮಾಣ ವಚನ ಸ್ವೀಕಾರ..!

ಮತ್ತೊಮ್ಮೆ ಪ್ರಮಾಣ ವಚನ ಸ್ವೀಕಾರ..!

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಟ, ಜಗ್ಗೇಶ್ ಸೋಮವಾರ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಿದರು. ಈ ಮೊದಲು ಜುಲೈ 8 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.

ಜುಲೈ 8ರಂದು ಕರ್ನಾಟಕದಿಂದ ಆಯ್ಕೆಯಾದ ನಾಲ್ವರು ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ರು. ಜಗ್ಗೇಶ್ ಅವರು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.


ಜಗ್ಗೇಶ್ ಅವರ ಪ್ರಮಾಣವಚನ ಕ್ರಮ ಬದ್ಧವಾಗಿದೆಯಾ ಎಂದು ಪರಿಶೀಲಿಸುವಂತೆ ರಾಜ್ಯಸಭಾ ಸಭಾಪತಿಗಳಾದ ಎಂ.ವೆಂಕಯ್ಯನಾಯ್ಡು ಅವರು ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆ ಮಾನ್ಸೂನ ಅಧಿವೇಶನ ಆರಂಭವಾದ ಮೊದಲ ದಿನ ಜಗ್ಗೇಶ್ ಮತ್ತೊಮ್ಮೆ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.


ಜುಲೈ 8ರಂದು ಪ್ರಮಾಣ ವಚನ ಸ್ವೀಕರಿಸಿದ ವಿಡಿಯೋವನ್ನು ಜಗ್ಗೇಶ್​ ಅವರು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡು, ‘ರಾಜ್ಯಸಭೆಯಲ್ಲಿ ಶ್ರದ್ಧೆಯಿಂದ ಪ್ರಮಾಣವಚನ ಸಿರಿಗನ್ನಡದಲ್ಲಿ ರಾಯರ ಹೆಸರಲ್ಲಿ ಸ್ವೀಕರಿಸಿದ ನನ್ನ ಬದುಕಿನ ಶ್ರೇಷ್ಠಕ್ಷಣ` ಎಂದು ಬರೆದುಕೊಂಡಿದ್ದರು.

Related