ಟೇಕ್ ಹೋಂ ರೇಷನ್ ಸೌಲಭ್ಯ

ಟೇಕ್ ಹೋಂ ರೇಷನ್ ಸೌಲಭ್ಯ

ಹಾನಗಲ್: ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಸಿ.ಎಂ. ಉದಾಸಿ ಅವರು ೨೦೧೯-೨೦ನೇ ಸಾಲಿನ ನಬಾರ್ಡ್ ಸಂಯೋಗದ ಆರ.ಐ.ಡಿ. ಎಫ್.೨೫ ಯೋಜನೆಯಡಿ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಶಿಥಿಲಗೊಂಡಿರುವ ಅಂಗನವಾಡಿ ಕಟ್ಟಡಗಳ ಮರು ನಿರ್ಮಾಣಕ್ಕೆ ಹಾವೇರಿ ಜಿಲ್ಲೆಯ ೬೪ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ರೂ ೧೦.೨೪ಕೋಟಿ ಬಿಡುಗಡೆಯಾದರೆ, ಹಾನಗಲ್ ತಾಲ್ಲೂಕಿನ ೫೧ ಅಂಗನವಾಡಿಗಳಿಗೆ ರೂ ೮ ಕೋಟಿ ಬಿಡುಗಡೆಯಾಗಿದೆ. ಸದರ್ ನೂತನ ಅಂಗನವಾಡಿ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದ್ದು ಕೂಡಲೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲು ಸೂಚಿಸಲಾಗಿದೆ.
ಹಾನಗಲ್ ತಾಲ್ಲೂಕಿನಲ್ಲಿ ಒಟ್ಟು ೩೧೯ ಅಂಗನವಾಡಿಗಳಿದ್ದು ೨೭೪ ಅಂಗನವಾಡಿಗಳು ಸ್ವಂತ ಕಟ್ಟಡ ಹೊಂದಿವೆ. ೪೫ ಅಂಗನವಾಡಿಗಳು ಈವರೆಗೆ ಸ್ವಂತ ಕಟ್ಟಡ ಹೊಂದಿರುವುದಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ೨೦೧೯-೨೦ನೇ ಸಾಲಿನಲ್ಲಿ ನಿವೇಶನ ಲಭ್ಯವಿರುವ ಹನುಮಾಪುರ ಉಪ್ಪಣಸಿ ತಿಳವಳ್ಳಿ ಗ್ರಾಮಗಳಿಗೆ ತಲಾ ಒಂದರಂತೆ ೩ ಅಂಗನವಾಡಿ ಕೇಂದ್ರ ಮಂಜೂರಾಗಿದ್ದು ರೂ.೫೪.೦೦ಲಕ್ಷ ಬಿಡುಗಡೆಯಾಗಿದೆ. ಸದರ್ ಅಂಗನವಾಡಿ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗಕ್ಕೆ ವಹಿಸಲಾಗಿದ್ದು ಕೂಡಲೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲು ಸೂಚಿಸಲಾಗಿದೆ
ಅಂಗನವಾಡಿ ಕೇಂದ್ರ ಮಂಜೂರಾದ ಗ್ರಾಮಗಳು, ಕಲಗುಡಿ, ಅಜಗುಂಡಿಕೊಪ್ಪ. ದಶರಥ್ ಕೊಪ್ಪ-೧, ನಿಟಗಿನಕೊಪ್ಪ ಹುಲಗಿನಹಳ್ಳಿ ಹಿರೇಬಾಸೂರು-೨, ಡೊಮನಾಳ ಬ್ಯಾಗವಾದಿ-೧, ತಾವರ್ ಗೊಪ್ಪ, ಉಪ್ಪಣಸಿ-೧, ಮುಳಥಳ್ಳಿ-೧, ಅಕ್ಕಿಆಲೂರು-೧. ಅಕ್ಕಿಆಲೂರು-೪, ಅರಿಷಿಣಗುಪ್ಪಿ-೧, ಯತ್ತಿನಹಳ್ಳಿ ಮ ಆಡೂರು, ಹೊಂಕಣ-೨, ವೀರಾಪುರ. ಗೊಂದಿ-೧, ಹಿರೇಕಾಂಶಿ-೧, ಹಿರೇಕಾಂಶಿ-೨, ಇನಾಮ್ ದ್ಯಾಮನಕೊಪ್ಪ-೧, ಸಾವಸಗಿ-೧. ಚನ್ನಾಪುರ, ಕಂಚಿನೆಗಳೂರ—೧, ಕಂಚಿ ನೆಗಳೂರು-೨, ಬಾಳಂಬೀಡ-೩, ಬಾಳಂಬೀಡ-೪, ಹೋತನಹಳ್ಳಿ-೧, ಹುಲ್ಲತ್ತಿ-೧, ಹುಲ್ಲತ್ತಿ-೨, ಬೈಲವಾಳ, ಗೊಟಗೋಡಿ. ಯಲವಟ್ಟಿ-೧ ಹಿರೇಹುಲ್ಲಾಳ -೧, ಗೇರಗುಡ ಬಸ್ಸಾಪುರ, ಕುಸ್ನೂರು-೨ ಹನುಮನಕೊಪ್ಪ. ಲಕ್ಷ್ಮೀಪುರ ಗೊಲ್ಲರ್ ಬಿಡಾರ್, ಹರಳ ಕೊಪ್ಪ, ಕರವಾಡಿ-೧ಹುಲಗಡ್ಡಿ, ಕೆ.ಜಿ.ಕೊಪ್ಪಅಲ್ಲಾಪುರ, ಗೆಜ್ಜೆಹಳ್ಳಿ-೨ ತಿಳವಳ್ಳಿ-೩ಹರವಿ-೧, ಬ್ಯಾತನಾಳ-೧, ಚೀರನಹಳ್ಳಿ, ನೆಲ್ಲಿಕೊಪ್ಪ, ಕೂಡಲ-೧, ಹನುಮಾಪುರ, ಉಪ್ಪಣಸಿ, ತಿಳವಳ್ಳಿ, ಹಾನಗಲ್ ತಾಲ್ಲೂಕಿನ ೩೧೯ ಅಂಗನವಾಡಿ ಕೇಂದ್ರಗಳಲ್ಲಿ ೨೪೦೦೦ ಮಕ್ಕಳು ದಾಖಲಾಗಿದ್ದು ಇವರಿಗೆ ಕೊರೋನಾ ಹಿನ್ನೆಲೆಯಲ್ಲಿ ಮಕ್ಕಳಿಗೆ ಟೇಕ್ ಹೋಮ್ ರೇಷನ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಎಲ್ಲ ಅಂಗನವಾಡಿಗಳನ್ನು ಆಧುನೀಕರಣ ಗೊಳಿಸಲಾಗುತ್ತಿದ್ದು ಪೋಷಣ ಅಭಿಯಾನದ ಯೋಜನೆಯಡಿ ೩೧೯ ಅಂಗನವಾಡಿಗಳಿಗೆ ಮೊಬೈಲ್ ಸ್ಮಾರ್ಟ್ ಫೋನ್ ನೀಡಲಾಗುತ್ತಿದ್ದು ಇದರಿಂದ ಮಕ್ಕಳ ಹಾಜರಾತಿ ಮತ್ತು ಮಗುವಿನ ಬೆಳವಣಿಗೆಯನ್ನು ಮೊಬೈಲ್ ಸಾಫ್ಟವೇರ್ ಮೂಲಕ ಅಪ್ಲೋಡ್ ಮಾಡಲಾಗುವುದು. ತಾಲ್ಲೂಕಿನಲ್ಲಿ ೪೬೦೦ಗರ್ಭಿಣಿ ಬಾಣಂತಿಯರಿದ್ದು ಅವರಿಗೂ ಸಹ ಟೇಕ್ ಹೋಮ್ ರೇಷನ್ ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ೨೦೧೯-೨೦ನೇ ಸಾಲಿನಲ್ಲಿ ೪೦೦೦ಜನ ಗರ್ಭಿಣಿಯರನ್ನು ದಾಖಲಿಸಲಾಗಿದ್ದು ನೇರವಾಗಿ ಫಲಾನುಭವಿಗಳ ಖಾತೆ ೫೦೦೦ರೂಗಳನ್ನು ಮೂರು ಹಂತದಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ ಎಂದು ಶಾಸಕರು ಸಿಎಂ ಉದಾಸಿ ಅವರು ಹೇಳಿದರು

Related