ತಾಕತ್ತು ಇದ್ರೆ ಆಂಟಿ ಎಂದು ಕರೆಯಿರಿ

ತಾಕತ್ತು ಇದ್ರೆ ಆಂಟಿ ಎಂದು ಕರೆಯಿರಿ

ಮುಂಬೈ, ಫೆ.2 : ನಟಿ ಸಮಂತಾ ಅಕ್ಕಿನೇನಿ ಬೋಲ್ಡ್ ಸ್ಟೇಟ್ಮೆಂಟ್ ನೀಡುವುದರಲ್ಲಿ ನಿಸ್ಸೀಮರು. ತನಗೆ ಅನ್ನಿಸಿದ್ದನ್ನು ಹಾಗೆಯೇ ಹೇಳುವ ಜಾಯಮಾನ ಅವರದು. ಹಾಲಿವುಡ್ ಪಾಪ್ ತಾರೆಗಳಾದ ಜೆನ್ನಿಫರ್ ಲೋಪೆಜ್, ಶಕೀರಾ ಇತ್ತೀಚೆಗೆ “ಸೂಪರ್ ಬೌಲ್ ಹಾಫ್ಟೈಮ್ ಶೋ 2020″ರಲ್ಲಿ ಪರ್ಫಾಮ್ ಮಾಡಿದ್ದರು. ಇದನ್ನು ನೋಡಿ ಸಮಂತಾ ಕ್ಲೀನ್ ಬೌಲ್ಡ್ ಆಗಿದ್ದಾರೆ.
ತಾಕತ್ತು ಇದ್ರೆ ಇವರನ್ನು ಆಂಟಿ ಎಂದು ಕರೆಯಿರಿ ಎಂದ ನಟಿ ಸಮಂತಾ ಅಕ್ಕಿನೇನಿ
ಸೂಪರ್ ಬೌಲ್ ಹಾಫ್ಟೈಮ್ ಶೋ 2020ನಲ್ಲಿ ಪಾಪ್ ತಾರೆಗಳಾದ ಶಕೀರಾ, ಜೆನ್ನಿಫರ್ ಲೋಪೆಜ್ ಅತ್ಯದ್ಭುತ ಪರ್ಫಾಮೆನ್ಸ್ ನೀಡಿದ್ದಾರೆ. ಈ ವಯಸ್ಸಲ್ಲೂ ಇವರಿಬ್ಬರೂ ಸ್ಟೇಜನ್ನೇ ಶೇಕ್ ಮಾಡಿದ್ದು ಎಲ್ಲೆಡೆಯಿಂದಲ್ಲೂ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ಮಿಯಾಮಿಯಲ್ಲಿನ ಹಾರ್ಡ್ ರಾಕ್ ಮೈದಾನದಲ್ಲಿ ಈ ಸೂಪರ್ ಬೌಲ್ ಶೋ ನಡೆಯಿತು. ಈ ಕಾರ್ಯಕ್ರಮವನ್ನು ಅಕ್ಕಿನೇನಿ ಕುಟುಂಬದ ಸೊಸೆ ಸಮಂತಾ ಸಹ ವೀಕ್ಷಿಸಿದ್ದಾರೆ. ಅವರ ಪರ್ಫಾಮೆನ್ಸ್ ನೋಡಿ “ನಾನು ನಿಮಗೆ ತಲೆಬಾಗಿ ವಂದಿಸುತ್ತಿದ್ದೇನೆ” ಎಂದು ಕಾಮೆಂಟ್ ಮಾಡಿದ್ದಾರೆ.

ಇದಿಷ್ಟೇ ಅಲ್ಲದೆ ಜೆನ್ನಿಫರ್ ಲೋಪೆಜ್ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿದ್ದು “ತಾಕತ್ತು ಇದ್ರೆ ಇವರನ್ನು ಯಾರಾದರೂ ಆಂಟಿ ಎಂದು ಕರೆಯಿರಿ” ಎಂದು ಅಭಿಮಾನಿಗಳಿಗೆ ಸವಾಲನ್ನು ಹಾಕಿದ್ದಾರೆ.

Related