ತಬ್ಬಲಿ ಆನೆಮರಿಗೆ ದತ್ತು ಪಡೆದ ದಂಪತಿ

ತಬ್ಬಲಿ ಆನೆಮರಿಗೆ ದತ್ತು ಪಡೆದ ದಂಪತಿ

ಬನ್ನೇರುಘಟ್ಟ, ಮಾ. 09 : ತಾಯಿ ಆನೆಯಿಂದ ಬೇರ್ಪಟ್ಟಿರುವ ಆನೆ ಮರಿಯನ್ನು ರಾಜ್ಯ ವನ್ಯಜೀವಿ ಸದಸ್ಯ ದಿನೇಶ್ ದತ್ತು ಪಡೆದಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನದಂದು ಹೆಣ್ಣು ಆನೆಮರಿಯನ್ನು ದತ್ತು ಪಡೆಯಬೇಕು ಎಂದು ಮೊದಲೇ ನಿರ್ಧರಿಸಿದ್ದ ದಿನೇಶ್ ಅವರು, ಪತ್ನಿ ಸಮೇತ ಉದ್ಯಾನಕ್ಕೆ ಆಗಮಿಸಿ, ದತ್ತು ಪಡೆಯುವ ಪ್ರಕ್ರಿಯೆ ಪೂರೈಸಿದರು. ಉದ್ಯಾನಕ್ಕೆ 1,75,000 ರೂ.ಗಳನ್ನು ನೀಡಿ ದತ್ತು ಪಡೆದರು. ಇದೇ ವೇಳೆ ಆನೆ ಮರಿಯನ್ನು ‘ಸರಸ್ವತಿ’ ಎಂದು ನಾಮಕರಣ ಮಾಡಲಾಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್, ”ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅದರೆ ಇಂದಿನಿಂದ ನಮಗೆ ಮೂವರು ಮಕ್ಕಳು. ಒಂದು ಹೆಣ್ಣು, ಇಬ್ಬರು ಗಂಡು ಮಕ್ಕಳು. ನಾನು ಜೀವಂತವಾಗಿರುವವರೆಗೂ ಆನೆ ಮರಿಯ ವರ್ಷದ ವೆಚ್ಚವನ್ನು ಭರಿಸುತ್ತೇನೆ,” ಎಂದು ತಿಳಿಸಿದರು.

ಆನೆ ಮರಿ ಸ್ಥಳಾಂತರ: ”ಆನೆ ಮರಿ ದಿನೇ ದಿನೆ ಚೇತರಿಸಿಕೊಳ್ಳುತ್ತಿದೆ. ಸದ್ಯ ಇರುವ ಜಾಗ ತುಂಬಾ ಚಿಕ್ಕದು. ಹಾಗಾಗಿ ಕೊಂಚ ವಿಶಾಲವಾದ ಮತ್ತು ಪ್ರತ್ಯೇಕವಾಗಿ ಶಾಂತವಾಗಿರುವ ಜಾಗಕ್ಕೆ ಸ್ಥಳಾಂತರ ಮಾಡಲಾಗುವುದು,” ಎಂದು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಉಮಾಶಂಕರ್ ತಿಳಿಸಿದರು.

Related