ವೈದ್ಯರಿಗೆ ಸೀಮಂತದ ಗೌರವ

ವೈದ್ಯರಿಗೆ ಸೀಮಂತದ ಗೌರವ

ಗೌರಿಬಿದನೂರು : ತಾಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ ಸುಮಾರು 12 ವರ್ಷ ಕಾರ್ಯ ನಿರ್ವಹಿಸಿ ಬೆಂಗಳೂರು ಕೊಡತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯ ಡಾ.ರಘುನಾಥ್‌ಗೆ ಸೀಮಂತದ ಡಾಕ್ಟರ್ ಎಂಬ ಪ್ರಶಸ್ತಿ ನೀಡಿ ಗೌರವಿಸಿದರು.
ಗಾಂಧೀಜಯಂತಿ ಪ್ರಯುಕ್ತ ಗ್ರಾಮದಲ್ಲಿ ನಡೆದ ಸೀಮಂತ ಕಾರ್ಯಕ್ರಮದಲ್ಲಿ 43 ಮಂದಿ ಗರ್ಭಿಣೀಯರಿಗೆ ಸೀಮಂತ ಮಾಡಲಾಯಿತು. ಈ ಹಿಂದೆ ಡಾ.ರಘುನಾಥ್ ಅನೇಕ ಶಿಬಿರಗಳನ್ನು ಮಾಡಿ ಗರ್ಭಿಣೀಯರಿಗೆ ಸೀಮಂತ ಮಾಡಿದ್ದರು. ಗ್ರಾಮದ ಜನತೆ ಇವರ ಸೇವೆಯನ್ನು ಸ್ಮರಿಸಿ ಗ್ರಾಮಕ್ಕೆ ಕರಿಸಿ ಗೌರವಿಸಿದ್ದರು.
ಅಭಿನಂದನೆಗಳನ್ನು ಸ್ವೀಕರಿಸಿದ ವೈದ್ಯ ರಘುನಾಥ್ ಮಾತನಾಡಿ ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇಂತಹ ಉಚಿತ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳುವ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ಸುಮಾರು 200 ಮಂದಿ ಹೈಸ್ಕೂಲು ವಿಧ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಪ್ರೇರಣೆ ಮಾಡಿದ್ದರು. ಅವರನ್ನು ಉತ್ತೇಜಿಸಲು ಕಾರ್ಯಕ್ರಮಗಳನ್ನು ರೂಪಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ ಅಶ್ವತ್ಥರೆಡ್ಡಿ, ತಾ.ಪಂ.ಸದಸ್ಯ ರಾಂಬಾಬು, ನಾರಾಯಣಸ್ವಾಮಿ, ವೈದ್ಯರಾದ ಅಶ್ವಿನಿಭಟ್, ಲಕ್ಷ್ಮಿ ರಘುನಾಥ್ ಇನ್ನಿತರರಿದ್ದರು.

Related