ಕ್ವಾರಂಟೈನ್‌ಲ್ಲಿರುವವರಿಗೆ ಸಿಹಿಯೂಟ

ಕ್ವಾರಂಟೈನ್‌ಲ್ಲಿರುವವರಿಗೆ ಸಿಹಿಯೂಟ

ಮುದ್ದೇಬಿಹಾಳ : ಮತಕ್ಷೇತ್ರ ವ್ಯಾಪ್ತಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಲ್ಲಿರುವ ವಲಸೆ ಕಾರ್ಮಿಕರಿಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಪತ್ನಿ ಸಮಾಜ ಸೇವಕಿ ಮಹಾದೇವಿ ಪಾಟೀಲ, ನಡಹಳ್ಳಿ ಹೋಳಿಗೆ ಸೀಕರಣೆ ಊಟ ಬಡಿಸಿದರು.

ತಾಲೂಕಿನ ಢವಳಗಿ ಗ್ರಾಮದ ವಿದ್ಯಾಸ್ಪೂರ್ತಿ ಪಬ್ಲಿಕ್ ಶಾಲೆಯಲ್ಲಿ ಕ್ವಾರಂಟೈನ್‌ಲ್ಲಿರುವ ಮಹಾರಾಷ್ಟç, ಕೇರಳ ರಾಜ್ಯದಿಂದ ಬಂದಿರುವ ತಾಲೂಕಿನ ಕಾರ್ಮಿಕರಿಗೆ ಸಿಹಿಊಟ ಬಡಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ವಾರಂಟೈನ್ ಅವಧಿ ಮುಗಿಸಿ ಊರಿಗೆ ವಾಪಾಸ್ಸಾಗುವ ಕಾರ್ಮಿಕರು ಮುಖದಲ್ಲಿ ಖುಷಿ ಕಂಡುಬರುತ್ತಿದೆ. ಹೋಳಿಗೆ, ಮಾವಿನ ಹಣ್ಣಿನ ಸೀಕರಣೆ ಊಟ ಕೊಟ್ಟರೆ ಅದಕ್ಕೆ ಮತ್ತಷ್ಟು ಅರ್ಥ ಬರುತ್ತದೆ ಎಂಬ ಕಾರಣಕ್ಕೆ ಹೋಳಿಗೆ, ಸೀಕರಣೆ ನೀಡಿದ್ದೇವೆ ಎಂದು ಹೇಳಿದರು.

ಅಂದಾಜು ಮೂರು ಸಾವಿರ ಜನರು ಕ್ವಾರಂಟೈನ್‌ಲ್ಲಿದ್ದು ಅವರಿಗೆ ಸಿಹಿಊಟ ನೀಡಲಾಗುತ್ತಿದೆ. 8-10 ಸಾವಿರ ಹೋಳಿಗೆ, ನಾಲ್ಕು ಕ್ವಿಂಟಲ್ ಮಾವಿನ ಹಣ್ಣು ತರಿಸಿದ್ದೇವೆ. ಕಾರ್ಮಿಕರಿಗೆ ಯಾವುದಕ್ಕೂ ಕಡಿಮೆ ಆಗಬಾರದು ಎಂಬ ಕಾರಣಕ್ಕೆ ಈ ಕಾರ್ಯ ಕೈಗೊಂಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಇಓ ಶಶಿಕಾಂತ ಶಿವಪೂರೆ, ಢವಳಗಿ ಗ್ರಾಪಂ ಎಸ್‌ಡಿಎ ಎಂ.ಕೆ. ಗುಡಿಮನಿ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಶಾಲೆಯ ಅಧ್ಯಕ್ಷೆ ಬಸಮ್ಮ ಸಿದರೆಡ್ಡಿ, ಸಂಗಮೇಶ ಹುಂಡೇಕಾರ, ಅಶೋಕ ರಾಠೋಡ ಸೇರಿದಂತೆ ಹಲವರು ಇದ್ದರು. ಗ್ರಾಮದ ಕಸ್ತೂರಿ ಬಾಲಕಿಯರ ವಸತಿ ಶಾಲೆ, ಆರ್.ಎಂ.ಎಸ್ ಶಾಲೆಯಲ್ಲಿ ಇರುವ ಅಂದಾಜು 3000 ವಲಸೆ ಕಾರ್ಮಿಕರಿಗೂ ಸಿಹಿಊಟ ನೀಡಲಾಯಿತು.

 

 

 

Related