ಖಾಸಗಿ ಆಸ್ಪತ್ರೆಗಳು ಸ್ಪಂದಿಸಿಲ್ಲ

ಖಾಸಗಿ ಆಸ್ಪತ್ರೆಗಳು ಸ್ಪಂದಿಸಿಲ್ಲ

ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಸರ್ಕಾರದ ಅವಶ್ಯಕತೆಗನುಗುಣವಾಗಿ ಸಹಕಾರ ನೀಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ದೂರಿದರು

ಎಚ್‍ಎಸ್‍ಆರ್ ಲೇ ಔಟ್‍ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ 11 ಸಾವಿರ ಬೆಡ್‍ಗಳು ಲಭ್ಯವಿದೆ. ಆದರೆ ಖಾಸಗಿ ಆಸ್ಪತ್ರೆಗಳು ನಮ್ಮ ಅವಶ್ಯಕತೆಗೆ ಸ್ಪಂದಿಸಿಲ್ಲ. ಇವರು ಸಹಕರಿಸಿದ್ದಲ್ಲಿ ಸುಮಾರು 5 ಸಾವಿರ ಬೆಡ್‍ಗಳು ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.

ಬೆಡ್‍ಗಳ ಮಾಹಿತಿ ನಮಗೆ ನೇರವಾಗಿ ತಲುಪುವುದಕ್ಕಾಗಿ ಪ್ರತಿ ವಾರ್ಡ್‍ಗೆ ಒಬ್ಬ ವಾರ್ಡನ್ ನೇಮಕ ಮಾಡಿದ್ದೇವೆ. ಇವರ ನೀಡುವ ಮಾಹಿತಿ ಆಧಾರದ ಮೇಲೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ಇದೀಗ ನಮ್ಮಲ್ಲಿ 1,200 ಬೆಡ್ ಲಭ್ಯವಿದೆ. ಆದರೆ ನಮಗೆ ಇನ್ನೂ ಬೆಡ್‍ಗಳ ಅವಶ್ಯಕತೆ ಇದೆ. ಅದಕ್ಕಿಂತ ಮುಖ್ಯವಾಗಿ ಆಮ್ಲಜನಕದ ನೆರವಿರುವ ಹಾಸಿಗೆಗಳ ಅವಶ್ಯಕತೆ ಇದೆ. 500-600 ಆಕ್ಸಿಜನ್ ನೆರವಿರುವ ಬೆಡ್‍ಗಳು ಒಂದು ವಾರ ಅಥವಾ 10 ದಿನಗಳಲ್ಲಿ ಸಿಗಲಿವೆ ಎಂದು ಹೇಳಿದರು.

ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣ ಮಾತನಾಡಿ, ಆನೇಕಲ್ ಬಳಿಯ ಆಕ್ಸ್‍ಫರ್ಡ್ ಮೆಡಿಕಲ್ ಕಾಲೇಜಿನಲ್ಲಿ ಆಕ್ಸಿಜನ್ ನೆರವಿರುವ 300 ಬೆಡ್‍ಗಳನ್ನು ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಬೊಮ್ಮನಹಳ್ಳಿಯಲ್ಲಿ 2250 ಮಂದಿ ಕೊರೋನಾ ಪಾಸಿಟಿವ್ ಪ್ರಕರಣಗಳಿವೆ. ಇದರಲ್ಲಿ 560 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 45 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದರು.

Related