ಆಸರೆಯಾದ ಖಾತರಿ

ಆಸರೆಯಾದ ಖಾತರಿ

ಉಡುಪಿ : ಲಾಕ್‍ಡೌನ್ ಹಿನ್ನಲೆ ಗ್ರಾಮೀಣದ ಜನರ ಉದ್ಯೋಗ ಕುಸಿದುಕೊಂಡಿದೆ, ಹೊಟ್ಟೆ ಹೊರೆಯುವುದು ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಬದುಕೇನ್ನುವುದು ಜೇಡರ ಬಲೆಯೊಳಗೆ ಸಿಕ್ಕ ಕೀಟದಂತೆ ಆಗಿದೆ. ಕಷ್ಟದ ದಿನಗಳನ್ನೆ ಎದುರಿಸುತ್ತಿದ್ದ ಶ್ರಮಿಕ ಜೀವಿಗಳಿಗೆ ಪ್ರಸ್ತುತ ಪರಿಸ್ಥಿತಿ ಅತೀವ ಸಂಕಷ್ಟ ತಂದೊಡ್ಡಿದೆ.

ಕಾಲೋನಿಯಲ್ಲಿ ವಾಸ ಮಾಡುವ ಜನರು ಹೆಚ್ಚಾಗಿ ಕೂಲಿ ಕಾರ್ಮಿಕರು. ಕೂಲಿ ಕೆಲಸ ಬಿಟ್ಟರೆ ಇವರಿಗೆ ಬದುಕಲು ಇನ್ಯಾವ ಮಾರ್ಗಗಳೂ ಇಲ್ಲ. ದಿನ ಕೆಲಸ ಇವರ ಬದುಕಾಗಿದ್ದು ದಿನದ ದುಡಿಮೆಯಲ್ಲಿ ಜೀವನದ ರಥ ಸಾಗಬೇಕು. ಭಾರತದ ಶಕ್ತಿಯೇ ಕಾರ್ಮಿಕರು ಎಂದರೆ ತಪ್ಪಾಗಲಾರದು. ಯಂತ್ರವು ತನ್ನ ಚಲನೆಯನ್ನು ಕಳೆದುಕೊಂಡಾಗ ಅದರಾಚೆಗಿನ ಸಂಪೂರ್ಣ ಕಾರ್ಯ ಚಟುವಟಿಕೆ ಸ್ತಬ್ಧಗೊಳ್ಳುತ್ತದೆ. ಕಾರ್ಮಿಕ ವರ್ಗಕ್ಕೆ ಮಾಡಲು ಕೆಲಸವಿಲ್ಲವೆಂದರೆ ಅವರ ಜೀವನ ದುಸ್ತರಗೊಳ್ಳುವುದಲ್ಲದೆ ದೇಶದ ಆರ್ಥಿಕ ಪ್ರಗತಿ ಸಹ ಕುಂಠಿತಗೊಳ್ಳುತ್ತದೆ.

ಈಗಿನ ಅಸಮತೋಲನದ ವಾತಾವರಣ ಅಸಂಘಟಿತ ಕರ್ಮಿಕ ರ್ಗದವರ ಮತ್ತು ರೈತರ ಜೀವನನ್ನು ಕಂಗೆಡಿಸಿಬಿಟ್ಟಿದೆ. ಉದ್ಯೋಗ ಖಾತರಿ ಯೋಜನೆಯಡಿ ಕೆರೆಯ ಹೂಳು ತೆಗೆಯುವುದು, ತೋಡಿನಲ್ಲಿ ಸಂಗ್ರಹಗೊAಡ ಮಣ್ಣನ್ನು ಮೇಲಕ್ಕೆ ಎತ್ತುವುದು, ಗದ್ದೆಯನ್ನು ಸಮತಟ್ಟು ಮಾಡುವ ಕೆಲಸ ಉಡುಪಿ ಜಿಲ್ಲೆಯಲ್ಲಿ ಭರದಿಂದ ಸಾಗುತ್ತಿದ್ದು, ಮಾಡಿದ್ದು ಒಳ್ಳೆಯದಾಯಿತು.

ದುಡಿಮೆ ಇಲ್ಲದೆ ಜೀವನ ನಡೆಸುವುದು ಹಳ್ಳಿಯ ಜನರಿಗೆ ಕಷ್ಟವಾಗಿತ್ತು. ಕೆಲಸದ ದಿನಗಳನ್ನು ಹೆಚ್ಚಿಸಿದ್ದು ಖುಷಿ ಕೊಟ್ಟಿದೆ. ನಿರಂತರ 90 ದಿನಗಳ ಕಾಲ ಕೆಲಸ ಮಾಡಲು ಅನುವು ಮಾಡಿಕೊಟ್ಟರೆ ಒಳಿತು. ಜನರ ಬಳಿ ದುಡ್ಡು ಒಡಾಡುವುದರಿಂದ ಗ್ರಾಮೀಣ ಭಾಗದಲ್ಲಿ ವ್ಯಾಪಾರ ಚಟುವಟಿಕೆ ಬಿರುಸುಗೊಳ್ಳುವ ಸಾಧ್ಯತೆ ಇದೆ.

 

Related